ಐಪಿಎಲ್: ಡೆಲ್ಲಿ ತಂಡಕ್ಕೆ ಕನ್ನಡಿಗ ಸುಚಿತ್

Update: 2019-04-15 01:48 GMT

ಹೊಸದಿಲ್ಲಿ, ಎ.14: ಗಾಯಗೊಂಡು ತಂಡದಿಂದ ಹೊರಗಿರುವ ಆಲ್‌ರೌಂಡರ್ ಹರ್ಷಲ್ ಪಟೇಲ್ ಸ್ಥಾನಕ್ಕೆ ಕರ್ನಾಟಕದ ಸ್ಪಿನ್ನರ್ ಜಗದೀಶ್ ಸುಚಿತ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

 ಡೆಲ್ಲಿ ತಂಡ ಈ ಆವೃತ್ತಿಯಲ್ಲಿ ಆಡಿರುವ 7 ಪಂದ್ಯಗಳ ಪೈಕಿ ಹರ್ಷಲ್ 2 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಮೊಹಾಲಿಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಅವರು ಗಾಯಕ್ಕೆ ತುತ್ತಾಗಿದ್ದರು. ಈ ಪಂದ್ಯದಲ್ಲಿ ಡೆಲ್ಲಿ 14 ರನ್‌ಗಳಿಂದ ಸೋಲು ಕಂಡಿತ್ತು. ಗಾಯದ ಕಾರಣ ಹರ್ಷಲ್ ಸುಮಾರು ನಾಲ್ಕು ವಾರಗಳ ಕಾಲ ಕ್ರಿಕೆಟ್‌ನಿಂದ ಹೊರಗುಳಿಯಬೇಕಾಯಿತು. ಹಾಗಾಗಿ ಈ ಋತುವಿನ ಐಪಿಎಲ್‌ನ್ನು ಅವರು ಸಂಪೂರ್ಣ ತಪ್ಪಿಸಿಕೊಳ್ಳಲಿದ್ದಾರೆ.

ಈ ನಡುವೆ 2015, 2016ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದ ಸುಚಿತ್, ಈ ವರ್ಷದ ಆರಂಭದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಮಾರಾಟವಾಗದೆ ಉಳಿದಿದ್ದರು. ಐಪಿಎಲ್‌ನಲ್ಲಿ ಒಟ್ಟು 14 ಪಂದ್ಯಗಳಿಂದ 10 ವಿಕೆಟ್ ಪಡೆದಿರುವ ಅವರು, 6 ಇನಿಂಗ್ಸ್‌ಗಳಿಂದ 150 ಸ್ಟ್ರೈಕ್‌ರೇಟ್‌ನಲ್ಲಿ 48 ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News