ಎ.16ಕ್ಕೆ ವಾಣಿಜ್ಯ ಪರೀಕ್ಷೆಗಳ ಫಲಿತಾಂಶ ಪ್ರಕಟ

Update: 2019-04-15 17:55 GMT

ಬೆಂಗಳೂರು, ಎ. 15: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ಜನವರಿ-2019ರಲ್ಲಿ ನಡೆಸಿದ ವಾಣಿಜ್ಯ ಪರೀಕ್ಷೆಗಳಾದ ಕನ್ನಡ ಬೆರಳಚ್ಚು, ಆಂಗ್ಲ ಬೆರಳಚ್ಚು, ಕನ್ನಡ ಶೀಘ್ರಲಿಪಿ, ಆಂಗ್ಲ ಶೀಘ್ರಲಿಪಿ ಮುಂತಾದ ಪರೀಕ್ಷೆಗಳ ಫಲಿತಾಂಶವನ್ನು ನಾಳೆ(ಎ.16) ಸಂಜೆ 4ಗಂಟೆಗೆ ರಾಜ್ಯದ ಎಲ್ಲ ವಾಣಿಜ್ಯ ಸಂಸ್ಥೆಗಳಲ್ಲಿ ಪ್ರಕಟಿಸಲಾಗುವುದು.

ಮೇಲ್ಕಂಡ ಎಲ್ಲ ಪರೀಕ್ಷೆಗಳಿಂದ ಒಟ್ಟು 9,686ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಒಟ್ಟು 6,397 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.66.04 ಫಲಿತಾಂಶ ಬಂದಿರುತ್ತದೆ ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News