ಮೊದಲ ಹಂತದ ಲೋಕಸಭಾ ಚುನಾವಣೆ: ರಾಜ್ಯದಲ್ಲಿ ಶೇ.67.79 ಮತ ಚಲಾವಣೆ

Update: 2019-04-18 16:09 GMT

ಬೆಂಗಳೂರು, ಎ.18: ಮೊದಲ ಹಂತದ ಲೋಕಸಭಾ ಚುನಾವಣೆಯ ಮತದಾನ ಪೂರ್ತಿಯಾಗಿದ್ದು, 14 ಲೋಕಸಭಾ ಕ್ಷೇತ್ರಗಳಲ್ಲಿ ಶೇ. 67.67 ರಷ್ಟು ಮತದಾನವಾಗಿದ್ದು, ಮಂಡ್ಯ(80.23) ಹಾಗೂ ಕರಾವಳಿ(77.70)ಯಲ್ಲಿ ಅತ್ಯಧಿಕ, ಬೆಂಗಳೂರು ನಗರದಲ್ಲಿ ಅತಿ ಕಡಿಮೆ ಮತದಾನವಾಗಿದೆ. ಚುನಾವಣೆ ಆರಂಭವಾದ ದಿನದಿಂದ ಇದುವರೆಗೂ ಶೇ.60 ರಷ್ಟು ಮತದಾನವಾದ ದಾಖಲೆಯಿಲ್ಲ ಎಂಬ ಟೀಕೆಗೆ ಗುರಿಯಾಗುವ ಬೆಂಗಳೂರು ಈ ಬಾರಿಯೂ ಕಡಿಮೆ ಮತದಾನವಾಗಿದೆ. 

ಮಂಗಳೂರು ಒಳಗೊಂಡ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಶೇ.77.70, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೇ.75.26 ಹಾಗೂ ತುಮಕೂರು ಕ್ಷೇತ್ರದಲ್ಲಿ ಶೇ.77.01 ಇದ್ದರೆ, ಹಾಸನದಲ್ಲಿ ಶೇ.77.28 ರಷ್ಟು ಮತದಾನವಾಗಿದೆ.

ಬೆಳಗ್ಗೆ 7 ರಿಂದ ಆರಂಭವಾದ ಮತದಾನ 9 ಗಂಟೆ ವೇಳೆ ಶೇ.7.60 ರಷ್ಟು ಮತದಾನ ದಾಖಲಾಗಿತ್ತು. ದಕ್ಷಿಣ ಕನ್ನಡ ಶೇ.14.94 ಹಾಗೂ ಉಡುಪಿ-ಚಿಕ್ಕಮಗಳೂರು ಶೇ.13 ರಷ್ಟಿದ್ದರೆ, ಬೆಂಗಳೂರು ನಗರದಲ್ಲಿ(ಮೂರು ಕ್ಷೇತ್ರಗಳು ಸೇರಿದಂತೆ) ಶೇ.14.71 ರಷ್ಟಾಗಿತ್ತು. 11 ಗಂಟೆ ವೇಳೆ ದಕ್ಷಿಣ ಕನ್ನಡ 32.10, ಉಡುಪಿ-ಚಿಕ್ಕಮಗಳೂರು ಶೇ.29.01, ತುಮಕೂರು ಶೇ.32.62 ರಷ್ಟಿದ್ದರೆ, ಬೆಂಗಳೂರಿನಲ್ಲಿ ಶೇ.50.87 ರಷ್ಟಿತ್ತು. ಮಧ್ಯಾಹ್ನದ 1 ಗಂಟೆ  ವೇಳೆಗೆ ದಕ್ಷಿಣ ಕನ್ನಡ ಶೇ.48.49 ರಷ್ಟಿದ್ದರೆ, ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳು ಸೇರಿದಂತೆ ಶೇ.72.6 ರಷ್ಟಿತ್ತು. ಮಧ್ಯಾಹ್ನ ಮೂರು ಗಂಟೆಯ ವೇಳೆ ಕ್ರಮವಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ-ಚಿಕ್ಕಮಗಳೂರು ಶೇ.60.46 ಹಾಗೂ 56.44 ಕ್ಕೆ ಏರಿಕೆ ಕಂಡಿತ್ತು. ಇನ್ನು ತುಮಕೂರು ಶೇ.54.88 ಮತದಾನವಾಗಿತ್ತು. ಸಂಜೆ ಐದು ಗಂಟೆ ವೇಳೆಗೆ ದಕ್ಷಿಣ ಕನ್ನಡ ಶೇ.72.97, ಉಡುಪಿ-ಚಿಕ್ಕಮಗಳೂರು ಶೇ.69.83, ತುಮಕೂರು ಶೇ.70.28 ರಷ್ಟು ಮತದಾನವಾಗಿದೆ. ಆದರೆ, ಬೆಂಗಳೂರು ಉತ್ತರ ಶೇ.48.19, ಬೆಂಗಳೂರು ಕೇಂದ್ರ 45.34, ಬೆಂಗಳೂರು ದಕ್ಷಿಣ ಶೇ.49.36 ರಷ್ಟು ಮತದಾನವಾಗಿದೆ.

ರಾತ್ರಿ 8 ಗಂಟೆಗೆ ಸಿಕ್ಕಿದ ಮಾಹಿತಿ ಪ್ರಕಾರ ದಕ್ಷಿಣ ಕನ್ನಡ ಶೇ.77.70, ಉಡುಪಿ-ಚಿಕ್ಕಮಗಳೂರು ಶೇ.75.13 ಇದ್ದರೆ, ತುಮಕೂರು ಶೇ.76.89 ರಷ್ಟಿದೆ. ಈ ವೇಳೆ ಬೆಂಗಳೂರು ಉತ್ತರ ಶೇ.48.64, ಬೆಂಗಳೂರು ಕೇಂದ್ರ 45.97, ಬೆಂಗಳೂರು ದಕ್ಷಿಣ 51.55 ರಷ್ಟಿದೆ. ರಾತ್ರಿ 9 ರ ಪ್ರಕಾರ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅಧಿಕ ಮತದಾನ ದಾಖಲಾಗಿದ್ದು, ಶೇ.80.23 ರಷ್ಟಿದೆ. ದಕ್ಷಿಣ ಕನ್ನಡದಲ್ಲಿ ಶೇ.77.70, ಉಡುಪಿ-ಚಿಕ್ಕಮಗಳೂರು ಶೇ.75.26, ತುಮಕೂರಿನಲ್ಲಿ ಶೇ.77.01 ರಷ್ಟಿತ್ತು. ಬೆಂಗಳೂರು ಉತ್ತರ ಶೇ.50.51, ಕೇಂದ್ರ 49.75 ಹಾಗೂ ದಕ್ಷಿಣ 54.12 ರಷ್ಟಿತ್ತು.

(ರಾತ್ರಿ 9 ರ ಮಾಹಿತಿ ಪ್ರಕಾರ)
ಕ್ಷೇತ್ರವಾರು ತಾತ್ಕಾಲಿಕ ಮತದಾನ ವಿವರ:(ಶೇಖಡವಾರು)

ಉಡುಪಿ-ಚಿಕ್ಕಮಗಳೂರು- 75.26
ಹಾಸನ- 77.28
ದಕ್ಷಿಣ ಕನ್ನಡ- 77.70
ಚಿತ್ರದುರ್ಗ- 70.59
ತುಮಕೂರು- 77.01
ಮಂಡ್ಯ- 80.23
ಮೈಸೂರು- 68.85
ಚಾಮರಾಜನಗರ- 73.45
ಬೆಂಗಳೂರು ಗ್ರಾಮಾಂತರ- 64.09
ಬೆಂಗಳೂರು ಉತ್ತರ- 50.51
ಬೆಂಗಳೂರು ಕೇಂದ್ರ- 49.75
ಬೆಂಗಳೂರು ದಕ್ಷಿಣ- 54.12
ಚಿಕ್ಕಬಳ್ಳಾಪುರ- 76.14
ಕೋಲಾರ- 75.94

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News