ಆಟೋದಲ್ಲಿ ಬಂದು ಮತದಾನ ಮಾಡಿದ ರಿಝ್ವಾನ್ ಅರ್ಷದ್

Update: 2019-04-18 16:16 GMT

ಬೆಂಗಳೂರು, ಎ.18: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ರಿಝ್ವಾನ್ ಅರ್ಷದ್ ಅವರು ಆಟೋದಲ್ಲಿ ಬಂದು ಮತದಾನ ಮಾಡುವ ಮೂಲಕ ಗಮನ ಸೆಳೆದರು. 

ಆಟೋ ಚಾಲಕಿ ಮಹಿಳೆ ಎನ್ನುವುದು ವಿಶೇಷವಾಗಿತ್ತು. ಗುರುವಾರ ರಿಝ್ವಾನ್ ಅರ್ಷದ್ ಅವರು ಪತ್ನಿ ನಹಿಝಾ ಅವರ ಜೊತೆ ರೆಸಿಡೆನ್ಸಿ ರಸ್ತೆಯ ಸೆಂಟ್ ಜೋಸೆಫ್ ಬಾಯ್ಸೆ ಕಾಲೇಜಿಗೆ ಬಂದು ತಮ್ಮ ಹಕ್ಕು ಚಲಾಯಿಸಿದರು. ಯುವಕರು ಹೆಚ್ಚು-ಹೆಚ್ಚು ಮತದಾನ ಮಾಡಬೇಕು ಎಂದು ಕರೆ ನೀಡಿದರು.

ಮತದಾನ ಕೇಂದ್ರಕ್ಕೆ ರಿಝ್ವಾನ್ ಅರ್ಷದ್ ಅವರು ಪತ್ನಿ ನಹಿಝಾ ಜೊತೆ ಬಂದ ಆಟೋವನ್ನು ಶಾಂತಮ್ಮ ಎಂಬ ಮಹಿಳಾ ಚಾಲಕಿ ಓಡಿಸುತ್ತಿದ್ದರು. ಮತದಾನ ಮಾಡಿದ ಬಳಿಕ ಮಾತನಾಡಿದ ರಿಝ್ವಾನ್ ಅರ್ಷದ್ ಅವರು, ಶಾಂತಮ್ಮ ಅವರು ಹಿಂದಿನಿಂದಲೂ ನನಗೆ ಪರಿಚಿತರು. ನೀವು ಅಭ್ಯರ್ಥಿಯಾದರೆ ನನ್ನ ಆಟೋದಲ್ಲಿ ಬರಬೇಕು ಎಂದು ಒತ್ತಾಯಿಸಿದ್ದರು. ಹೀಗಾಗಿ, ಮತದಾನ ಮಾಡಲು ಆಟೋದಲ್ಲಿ ಬಂದೆ ಎಂದರು.

ಕ್ಷೇತ್ರದಲ್ಲಿ ಪ್ರಚಾರ ನಡೆಸುವಾಗ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಬದಲಾವಣೆಗೆ ಒಂದು ಅವಕಾಶವಿದೆ. ಎಲ್ಲರೂ ಬಂದು ಮತದಾನ ಮಾಡಬೇಕು. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್, ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ರಿಝ್ವಾನ್ ಅರ್ಷದ್, ಪಕ್ಷೇತರ ಅಭ್ಯರ್ಥಿಯಾಗಿ ನಟ ಪ್ರಕಾಶ್‌ರಾಜ್ ಕಣದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News