ನೊವಾಕ್ ಜೊಕೊವಿಕ್ ಕ್ವಾರ್ಟರ್ ಫೈನಲ್ ಗೆ ಲಗ್ಗೆ

Update: 2019-04-19 04:11 GMT

ಮೊಂಟೆಕಾರ್ಲೊ, ಎ.18: ತನ್ನ ಗೆಲುವಿನ ಓಟ ಮುಂದುವರಿಸಿದ ಅಗ್ರ ಶ್ರೇಯಾಂಕದ ನೊವಾಕ್ ಜೊಕೊವಿಕ್ ಮೊಂಟೆಕಾರ್ಲೊ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ಇಲ್ಲಿ ಗುರುವಾರ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಎರಡು ಬಾರಿಯ ಚಾಂಪಿಯನ್ ಜೊಕೊವಿಕ್ ಅಮೆರಿಕದ ಟೇಲರ್ ಫ್ರಿಟ್ಝ್ ರನ್ನು 6-3, 6-0 ಸೆಟ್‌ಗಳ ಅಂತರದಿಂದ ಮಣಿಸಿದರು. 2016ರಲ್ಲಿ ಸ್ಯಾಮ್ ಕರ್ರೆ ವಿರುದ್ಧ ಸೋತ ಬಳಿಕ ಜೊಕೊವಿಕ್ ಅಮೆರಿಕದ ಆಟಗಾರರ ವಿರುದ್ಧ ಸತತ 9ನೇ ಗೆಲುವು ಪಡೆದರು.

ಮೊಂಟೆಕಾರ್ಲೊದಲ್ಲಿ 13ನೇ ಬಾರಿ ಆಡಿರುವ ವಿಶ್ವದ ನಂ.1 ಆಟಗಾರ ಜೊಕೊವಿಕ್ 9ನೇ ಬಾರಿ ಕ್ವಾರ್ಟರ್ ಫೈನಲ್‌ಗೆ ತೇರ್ಗಡೆಯಾಗಿದ್ದಾರೆ. ಜೊಕೊವಿಕ್ ಮುಂದಿನ ಸುತ್ತಿನಲ್ಲಿ ರಶ್ಯದ ಡೇನಿಲ್ ಮೆಡ್ವೆಡೆವ್‌ರನ್ನು ಎದುರಿಸಲಿದ್ದಾರೆ.

ಹಾಲಿ ಚಾಂಪಿಯನ್ ರಫೆಲ್ ನಡಾಲ್ ಫ್ರೆಂಚ್ ಓಪನ್ ಆರಂಭಕ್ಕೆ ಮೊದಲು ಎರಡನೇ ಪಂದ್ಯವನ್ನು ಆಡಿದ್ದು, ಮೂರನೇ ಸುತ್ತಿನಲ್ಲಿ ಗ್ರಿಗೊಟ್ ಡಿಮಿಟ್ರೊವ್‌ರನ್ನು ಎದುರಿಸಲಿದ್ದಾರೆ.

►ಮೆಡ್ವೆಡೆವ್‌ಗೆ ಮಣಿದ ಸಿಟ್‌ಸಿಪಾಸ್:

ಮೊಂಟೆಕಾರ್ಲೊ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಗುರುವಾರ ಆರನೇ ಶ್ರೇಯಾಂಕದ ಸ್ಟೆಫನೊಸ್ ಸಿಟ್‌ಸಿಪಾಸ್ ಅವರು ರಶ್ಯದ ಡೇನಿಲ್ ಮೆಡ್ವೆಡೆವ್ ವಿರುದ್ಧ 

2-6, 6-1, 4-6 ಸೆಟ್‌ಗಳ ಅಂತರದಿಂದ ಶರಣಾದರು.

10ನೇ ಶ್ರೇಯಾಂಕದ ಸ್ಟೆಫನೊಸ್ ಕ್ವಾರ್ಟರ್ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ನೊವಾಕ್ ಜೊಕೊವಿಕ್‌ರನ್ನು ಎದುರಿಸಲಿದ್ದಾರೆ.ಅಗ್ರ-10 ಆಟಗಾರನ ವಿರುದ್ಧ ಎರಡನೇ ಪಂದ್ಯವನ್ನು ಆಡಿದ ಮಡ್ವೆಡೆವ್ ಮಾಸ್ಟರ್ಸ್ ಟೂರ್ನಿಯಲ್ಲಿ ಮೊದಲ ಬಾರಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

ಟೊರೊಂಟೊದಲ್ಲಿ ಕಳೆದ ವರ್ಷ ಎರಡನೇ ಸ್ಥಾನ ಪಡೆದಿದ್ದ ಸಿಟ್‌ಸಿಪಾಸ್ ಈ ಋತುವಿನಲ್ಲಿ 8ನೇ ಸೋಲು ಕಂಡರು.

ಗ್ರೀಸ್ ಆಟಗಾರ ಮೆಡ್ವೆಡೆವ್ ಈ ತನಕ ಸಿಟ್‌ಸಿಪಾಸ್ ವಿರುದ್ಧ ಆಡಿದ್ದ ಎಲ್ಲ ನಾಲ್ಕು ಪಂದ್ಯಗಳನ್ನು ಜಯಿಸಿದ್ದರು. ಇದೀಗ ಗೆಲುವಿನ ಓಟ ಮುಂದುವರಿಸಿರುವ
ಮೆಡ್ವೆಡೆವ್ ಎಟಿಪಿ ರ್ಯಾಂಕಿಂಗ್‌ನಲ್ಲಿ 20ನೇ ಸ್ಥಾನ ತಲುಪಿದ್ದಾರೆ.

ಱಇದು ನನ್ನ ಪಾಲಿಗೆ ಶ್ರೇಷ್ಠ ಸಾಧನೆ. ಇಂದು ಎಲ್ಲವೂ ನನ್ನ ಪರವಾಗಿತ್ತು. ಎರಡನೇ ಸೆಟ್‌ನಲ್ಲಿ ಸ್ವಲ್ಪ ಗಾಳಿ ಬೀಸಿತು.ಮೂರನೇ ಸೆಟ್‌ನಲ್ಲಿ ಪ್ರತಿ ಚೆಂಡನ್ನೂ ಚೆನ್ನಾಗಿ ನಿಭಾಯಿಸಿದ್ದೇನೆ. ಮೂರನೇ ಸೆಟ್‌ನಲ್ಲಿ ಸ್ವಲ್ಪ ಹಿನ್ನಡೆ ಅನುಭವಿಸಿದ್ದರೂ ಕೊನೆಗೂ ಗೆಲುವು ಸಾಧಿಸಿರುವುದಕ್ಕೆ ಸಂತೋಷ ವಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News