ಮೇ 9ರಿಂದ ಲಾಟರಿ ಮೂಲಕ ಟಿಕೆಟ್‌ಗೆ ಅರ್ಜಿ

Update: 2019-04-19 04:16 GMT

ಟೋಕಿಯೊ ಒಲಿಂಪಿಕ್ಸ್ 2020

ಟೋಕಿಯೊ, ಎ.18: ಜಪಾನ್ ನಿವಾಸಿಗಳು 2020ರ ಟೋಕಿಯೊ ಒಲಿಂಪಿಕ್ ಗೇಮ್ಸ್‌ನ ಟಿಕೆಟ್‌ಗಾಗಿ ಮೇ 9ರಿಂದ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಒಲಿಂಪಿಕ್ ಸಂಘಟನಾ ಸಮಿತಿ ಗುರುವಾರ ಹೇಳಿದೆ. ಮೇ 9ರಿಂದ 28ರವರೆಗೆ ನಡೆಯುವ ಲಾಟರಿ ಪದ್ಧತಿ ಮೂಲಕ ಟಿಕೆಟ್‌ಗೆ ಅರ್ಜಿ ಸಲ್ಲಿಸಲು ಜಪಾನ್ ನಿವಾಸಿಗಳು ಅರ್ಹರಾಗಿದ್ದಾರೆ. ತಮ್ಮ ಅರ್ಜಿ ಸ್ವೀಕೃತವಾಗಿದೆಯೇ ಎಂಬುದನ್ನು ಜೂ.20ಕ್ಕೆ ಕಂಡುಕೊಳ್ಳಬಹುದಾಗಿದೆ.

ಜಪಾನ್ ಹೊರತುಪಡಿಸಿ ಬೇರೆ ದೇಶದವರು ಈ ಪದ್ಧತಿಯ ಮೂಲಕ ಟಿಕೆಟ್ ಪಡೆದುಕೊಳ್ಳಲು ಅವಕಾಶವಿಲ್ಲ . ಬದಲಾಗಿ ತಮ್ಮ ದೇಶದ ನಿರ್ದಿಷ್ಟ ಅಧಿಕೃತ ಟಿಕೆಟ್ ಮರುಮಾರಾಟಗಾರ ರ (ಎಟಿಆರ್‌ಗಳು)ಮೂಲಕ ಪಡೆದುಕೊಳ್ಳಬಹುದಾಗಿದೆ. ಟಿಕೆಟ್ ವಿತರಣಾ ಪದ್ಧತಿ ದೇಶದಿಂದ ದೇಶಕ್ಕೆ ಭಿನ್ನವಾಗಿರಲಿದೆ. ಆದರೆ ಜೂ.15ಕ್ಕಿಂತ ಮೊದಲು ಅಂತರ್‌ರಾಷ್ಟ್ರೀಯ ಮಾರಾಟ ಸಾಧ್ಯವಾಗುವುದಿಲ್ಲ. ಪ್ರತಿ ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಗಳು (ಎನ್‌ಒಸಿ) ತಮ್ಮ ಅಂಗೀಕೃತ ಎಟಿಆರ್‌ಗಳ ಮೂಲಕ ಕೆಲವು ಸಂಖ್ಯೆಯ ಟಿಕೆಟ್ ಮಾರಾಟ ಮಾಡಬಹುದಾಗಿದೆ.

ಪ್ರತೀ ಎನ್‌ಒಸಿಗೆ ಎಷ್ಟು ಟಿಕೆಟ್ ಮಾರಾಟ ಮಾಡಲು ಹಂಚಲಾಗಿದೆ ಎಂಬುದನ್ನು ತಿಳಿಸಲು ಒಲಿಂಪಿಕ್ಸ್ ಸಂಘಟನಾ ಸಮಿತಿ ನಿರಾಕರಿಸಿದೆ. ಅದೂ ಅಲ್ಲದೆ ಅಂತರ್‌ರಾಷ್ಟ್ರೀಯ ಗ್ರಾಹಕರಿಗೆ ಎಟಿಆರ್ ಎಷ್ಟು ಕಮಿಶನ್ ಶುಲ್ಕವನ್ನು ವಿಧಿಸಲಿದೆ ಎಂಬುದನ್ನು ಅದು ತಿಳಿಸಿಲ್ಲ. 70-80 ಶೇ. ಟಿಕೆಟ್‌ಗಳನ್ನು ಸ್ಥಳೀಯರಿಗೆ ಮೀಸಲಿರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News