ಐಪಿಎಲ್ ನಲ್ಲಿ 150 ವಿಕೆಟ್ ಪಡೆದ ಭಾರತದ ಮೊದಲಿಗ ಅಮಿತ್ ಮಿಶ್ರಾ

Update: 2019-04-19 04:36 GMT

ಹೊಸದಿಲ್ಲಿ, ಎ.18: ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಭಾರತದ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಗುರುವಾರ ಐಪಿಎಲ್ ಇತಿಹಾಸದಲ್ಲಿ 150 ಹಾಗೂ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಭಾರತದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

140ನೇ ಐಪಿಎಲ್ ಪಂದ್ಯವನ್ನಾಡಿದ ಮಿಶ್ರಾ ಗುರುವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಡೆಲ್ಲಿ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಮುಂಬೈ ವಿರುದ್ಧ ಪಂದ್ಯಕ್ಕಿಂತ ಮೊದಲು ಮಿಶ್ರಾ 149 ವಿಕೆಟ್‌ಗಳನ್ನು ಕಬಳಿಸಿದ್ದರು. 150 ವಿಕೆಟ್ ಪೂರೈಸಲು ಒಂದು ವಿಕೆಟ್ ಬೇಕಾಗಿತ್ತು. 36ರ ಹರೆಯದ ಮಿಶ್ರಾ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ(30,22 ಎಸೆತ) ವಿಕೆಟನ್ನು ಉರುಳಿಸಿ ಈ ಮೈಲುಗಲ್ಲು ತಲುಪಿದರು. ಮಿಶ್ರಾ ಟೂರ್ನಮೆಂಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ 2ನೇ ಬೌಲರ್.

ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಲಸಿತ್ ಮಾಲಿಂಗ ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಮಾಲಿಂಗ 115 ಐಪಿಎಲ್ ಪಂದ್ಯಗಳಲ್ಲಿ 161 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

152 ಐಪಿಎಲ್ ಪಂದ್ಯಗಳಲ್ಲಿ 146 ವಿಕೆಟ್ ಪಡೆದಿರುವ ಕೆಕೆಆರ್‌ನ ಪಿಯೂಷ್ ಚಾವ್ಲಾ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಚೆನ್ನೈ ತಂಡದ ಡ್ವೆಯ್ನ್ ಬ್ರಾವೊ(143 ವಿಕೆಟ್) ಹಾಗೂ ಹರ್ಭಜನ್ ಸಿಂಗ್(141) ಕ್ರಮವಾಗಿ 4ನೇ ಹಾಗೂ 5ನೇ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News