ಭಾರತಕ್ಕೆ ಮೀರಾಬಾಯಿ ಸಾರಥ್ಯ

Update: 2019-04-19 18:47 GMT

ಹೊಸದಿಲ್ಲಿ, ಎ.19: ಏಶ್ಯನ್ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ನಿಂಗ್ಬೊನಲ್ಲಿ ಶನಿವಾರ ಆರಂಭವಾಗಲಿದ್ದು, ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ಭಾರತೀಯರ ಸವಾಲನ್ನು ಮುನ್ನಡೆಸಲಿದ್ದಾರೆ. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅರ್ಹತೆಪಡೆಯಲು ಈ ಟೂರ್ನಿ ಅತ್ಯಂತ ಮುಖ್ಯವಾಗಿದೆ.

ಭಾರತದ ಪದಕದ ಭರವಸೆಯಾಗಿರುವ ಮೀರಾಬಾಯಿ ಅಂತರ್‌ರಾಷ್ಟ್ರೀಯ ವೇಯ್ಟ ಲಿಫ್ಟಿಂಗ್ ಫೆಡರೇಶನ್ ತೂಕ ವಿಭಾಗವನ್ನು ಬದಲಿಸಿದ ಕಾರಣ 48 ಕೆಜಿಯಿಂದ 49 ಕೆಜಿಗೆಭಡ್ತಿ ಪಡೆದಿದ್ದಾರೆ. ಸುಮಾರು 9 ತಿಂಗಳ ಕಾಲ ಸ್ಪರ್ಧೆಯಿಂದ ದೂರಉಳಿಸಿರುವ ಬೆನ್ನುನೋವಿನಿಂದಚಾನು ಸಂಪೂರ್ಣ ಚೇತರಿಸಿಕೊಂಡು ವಾಪಸಾಗಿದ್ದಾರೆ.

ಫೆಬ್ರವರಿಯಲ್ಲಿ ಥಾಯ್ಲೆಂಡ್‌ನಲ್ಲಿ ನಡೆದ ಇಜಿಎಟಿ ಕಪ್‌ನಲ್ಲಿ 24ರ ಹರೆಯದ ಚಾನು ಒಟ್ಟು 192 ಕೆಜಿ(82 ಕೆಜಿ ಸ್ನಾಚ್+110 ಕೆಜಿ ಕ್ಲೀನ್-ಜರ್ಕ್)ಎತ್ತಿ ಹಿಡಿದು ಚಿನ್ನ ಜಯಿಸಿದ್ದರು. ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಜೊಕೊವಿಕ್ ನಿಂಗ್ಬೊನಲ್ಲಿ ಪದಕಜಯಿಸಬೇಕಾದರೆ ಉತ್ತಮ ಪ್ರದರ್ಶನ ನೀಡಬೇಕಾಗಿದೆ.

ಮೀರಾ ಒಲಿಂಪಿಕ್ಸ್‌ಗಾಗಿ 210 ಕೆಜಿ ಗುರಿ ಹಾಕಿಕೊಂಡಿದ್ದು, ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ 194 ಕೆಜಿ ಮಾರ್ಕ್‌ನ್ನು ದಾಟಲಿದ್ದಾರೆ ಎಂದು ರಾಷ್ಟ್ರೀಯ ಕೋಚ್ ವಿಜಯ್ ಶರ್ಮಾ ಪಿಟಿಐಗೆ ತಿಳಿಸಿದರು.

ಪುರುಷ ವೇಟ್‌ಲಿಫ್ಟರ್‌ಗಳ ಪೈಕಿ ಯೂತ್ ಒಲಿಂಪಿಕ್ ಗೇಮ್ಸ್ ಚಾಂಪಿಯನ್ ಜೆರೆಮಿ ಲಾಲ್‌ರಿನ್ನುಂಗಾ ಮೇಲೆಹೆಚ್ಚಿನ ವಿಶ್ವಾಸ ಇರಿಸಲಾಗಿದೆ. ಸತೀಶ್ ಶಿವಲಿಂಗಂ ಈ ಬಾರಿಯ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿಲ್ಲ.

‘‘ಸತೀಶ್ ಹಾಗೂ ಆರ್.ವಿ. ರಾಹುಲ್ ಚೀನಾಕ್ಕೆ ಪ್ರಯಾಣಿಸುತ್ತಿಲ್ಲ. ಇವರಿಬ್ಬರ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿರದ ಕಾರಣ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿಲ್ಲ’’ ಶರ್ಮಾ ತಿಳಿಸಿದ್ದಾರೆ.

ಮಣಿಪುರದ 16ರ ಬಾಲಕ ಜೆರೆಮಿ ಐಡಬ್ಲುಎಫ್‌ನ ಪರಿಷ್ಕೃತ ತೂಕ ವಿಭಾಗಕ್ಕೆ ಗೌರವ ನೀಡಲು 62 ಕೆಜಿಯಿಂದ 67ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಜೆರೆಮಿ ಥಾಯ್ಲೆಂಡ್‌ನಲ್ಲಿ ನಡೆದಿದ್ದ ಇಜಿಎಟಿ ಕಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದು, ಮತ್ತೊಮ್ಮೆ ಪ್ರಶಸ್ತಿಯನಿರೀಕ್ಷೆಯಲ್ಲಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ವಿಕಾಸ್ ಠಾಕೂರ್(96ಕೆಜಿ), ಏಶ್ಯನ್ ಯೂತ್ ಹಾಗೂ ಜೂನಿಯರ್ ವೇಯ್ಟಿಲಿಫ್ಟಿಂಗ್‌ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತ ಅಜಯ್ ಸಿಂಗ್(81ಕೆಜಿ)ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.

18 ತಿಂಗಳ ಅವಧಿಯಲ್ಲಿ ಆರು ಸ್ಪರ್ಧೆಗಳಲ್ಲಿ ವೇಯ್ಟಲಿಫ್ಟರ್‌ಗಳ ಪ್ರದರ್ಶನವನ್ನು ಆಧರಿಸಿ 2020ರ ಒಲಿಂಪಿಕ್ಸ್ ಅರ್ಹತಾ ಪ್ರಕ್ರಿಯೆ ನಡೆಯಲಿದೆ. ಪ್ರತಿ ಅಥ್ಲೀಟ್ ಒಂದೂವರೆ ವರ್ಷದಲ್ಲ್ಲಿ ಕನಿಷ್ಠ ಒಂದು ಚಿನ್ನ ಅಥವಾ ಬೆಳ್ಳಿ ಮಟ್ಟದ ಟೂರ್ನಿಯಲ್ಲಿ ಆಡುವಅಗತ್ಯವಿದೆ ಎಂದು ಶರ್ಮಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News