ಮಾನುಷ್-ರೇಗಾನ್‌ಗೆ ಕಂಚಿನ ಪದಕ

Update: 2019-04-19 18:50 GMT

ಬ್ರಸೆಲ್ಸ್, ಎ.19: ಐಟಿಟಿಎಫ್ ಜೂನಿಯರ್ ಸರ್ಕ್ಯೂಟ್ ಪ್ರೀಮಿಯಮ್‌ನ ಭಾಗವಾದ ಬೆಲ್ಜಿಯಂ ಜೂನಿಯರ್ ಹಾಗೂ ಕೆಡೆಟ್ ಓಪನ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಶುಕ್ರವಾರ ಭಾರತದ ಮಾನುಷ್ ಶಾ-ರೇಗಾನ್ ಅಲ್ಬುಕರ್ಕ್ ಜೋಡಿ ಮಿಶ್ರ ತಂಡವಿಭಾಗದಲ್ಲಿ ಕಂಚಿನ ಪದಕ ಜಯಿಸಿದೆ.

ಇರಾನ್‌ನ ಅಮಿನ್ ಅಹ್ಮದಿಯನ್ ಹಾಗೂ ರಾದಿನ್ ಖಯ್ಯಮ್ ಜೊತೆಯಾಗಿ ಭಾರತದ ಜೋಡಿ ಕಿರಿಯ ಬಾಲಕರ ವಿಭಾಗದಲ್ಲಿ ಪದಕ ಗೆದ್ದುಕೊಂಡಿತು.

ಮೊದಲ ಪಂದ್ಯದಲ್ಲಿ ಇರಾನ್‌ನ ಅಮಿನ್ ಅವರು ಬೆಲ್ಜಿಯಂನ ಆಡಿಯನ್‌ಗೆ 0-3 ನಿಂದ ಸೋತರು. ಆ ಮೂಲಕ ಎದುರಾಳಿ ಸ್ಥಳೀಯ ಆಟಗಾರರ ವಿರುದ್ಧ ಉತ್ತಮ ಆರಂಭವನ್ನೇನೂ ಇಂಡೋ-ಇರಾನಿಯನ್ ಜೋಡಿಯು ಪಡೆಯಲಿಲ್ಲ. ಆದಾಗ್ಯೂಭಾರತದ ಮಾನಿಷ್ 3-1ರಿಂದ ಒಲಾವ್ ಕೊಸೊಲೊಸ್ಕಿ ವಿರುದ್ಧ ಜಯಿಸಿದರು. ಆ ಬಳಿಕ ರೇಗಾನ್ ಎದುರಾಳಿಗೆ ಸೋತರು. ಮಾನುಷ್ ಮತ್ತೊಂದು ಜಯ ಸಾಧಿಸಿದರು. ಆ ಬಳಿಕ ಇರಾನ್‌ನ ಅಮಿನ್ ಪಂದ್ಯವನ್ನು ಜಯಿಸಿ ತಂಡವನ್ನು ಸೆಮಿಫೈನಲ್‌ಗೆಕೊಂಡೊಯ್ದರು.

ಸೆಮಿಫೈನಲ್‌ನಲ್ಲಿ ಇಂಡೋ-ಇರಾನಿಯನ್ ಮಿಶ್ರ ತಂಡವು ಜಪಾನ್‌ನ ಯೋಶಿಹಾಮ- ತಾಕೆರು ಕಶಿವಾ ಹಾಗೂ ನ್ಯೂಝಿಲ್ಯಾಂಡ್‌ನ ನಥಾನ್ ಕ್ಸು ಒಳಗೊಂಡ ತಂಡದ ವಿರುದ್ಧ 0-3ರಿಂದ ಸೋಲು ಅನುಭವಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News