ನೌಕಾಸನದಲ್ಲಿ ವಿಶ್ವದಾಖಲೆ ನಿರ್ಮಿಸಿದ ಡಾ.ರಮೇಶ್ ಬಾಬು

Update: 2019-04-20 17:49 GMT

ಬೆಂಗಳೂರು, ಎ.20: ಒಂದು ಗಂಟೆಗಳ ಕಾಲ ತಡೆರಹಿತ ನೌಕಾಸನಗಳನ್ನು ಪ್ರದರ್ಶಿಸಿರುವ ಡಾ.ಎಸ್.ರಮೇಶ್ ಬಾಬು ತಮ್ಮ 65ನೇ ವಿಶ್ವ ದಾಖಲೆಯನ್ನು ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೂ ವಿವಿಧ ಕ್ಷೇತ್ರಗಳಲ್ಲಿ 64 ವಿಶ್ವ ದಾಖಲೆ, 9 ರಾಷ್ಟ್ರೀಯ ದಾಖಲೆಗಳನ್ನು ಸ್ಥಾಪಿಸಲಾಗಿದೆ. ನಿವೃತ್ತ ಲೋಹ ಶಾಸ್ತ್ರಜ್ಞಾನಿ ಪ್ರೊ.ರಮೇಶ್ ಬಾಬು ಒಂದು ಗಂಟೆಯ ಕಾಲಾವಧಿಯಲ್ಲಿ 652 ಪವನ ಮುಕ್ತಾಸನಗಳನ್ನು ಯಶಸ್ವಿಯಾಗಿ ಪೂರೈಸಿರುವುದಾಗಿ ತಿಳಿಸಿದರು. ಕಳೆದ ಎಪ್ರಿಲ್ 14ರ ಬೆಳಿಗ್ಗೆ 7.30 ರಿಂದ 8.30 ರವರೆಗೆ ಈ ವಿಶ್ವ ದಾಖಲೆಯನ್ನು ಬೆಂಗಳೂರಿನ ಕೊಡಿಗೆಹಳ್ಳಿಯ ಟಾಟಾ ನಗರದ ಪ್ರೊ.ಸತೀಶ್ ಧವನ್ ಉದ್ಯಾನವನದಲ್ಲಿ ಸ್ಥಾಪಿಸಲಾಯಿತು. ವಿಶ್ವ ದಾಖಲೆ ಸ್ಥಾಪಿಸಲು ವಿಧಿಸಿರುವ ಎಲ್ಲ ನಿಯಮಗಳ ಅನುಸಾರ ನೌಕಾಸನವನ್ನು ಪ್ರದರ್ಶಿಸಲಾಯಿತು ಎಂದು ತಿಳಿಸಿದರು.

ಸಾರ್ವಜನಿಕರಿಗೂ ಸಹ ಈ ವಿಶ್ವ ದಾಖಲೆ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. 300 ನೌಕಾಸನವನ್ನು 45 ನಿಮಿಷಗಳಲ್ಲಿ ಪೂರೈಸುವ ಗುರಿ ಹೊಂದಲಾಗಿತ್ತು. ಆದರೆ 28 ನಿಮಿಷ 30 ಸೆಕೆಂಡುಗಳಲ್ಲಿ 300 ನೌಕಾಸನಗಳನ್ನು ಪ್ರದರ್ಶಿಸಿ ಯಶಸ್ವಿಯಾಗಿದೆ ಎಂದು ತಿಳಿಸಿದ ಅವರು ಈ ಸಾಧನೆಯನ್ನು ಯೋಗಾ ಕ್ಷೇತ್ರದ ಅನೇಕ ಮಹನೀಯರು ಶ್ಲಾಘಿಸಿರುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News