ಆಧುನಿಕತೆಯ ನಡುವೆಯೂ ಕರಾವಳಿ ಸಂಸ್ಕೃತಿ ತುಳು ನಾಡಿಗರ ಬದುಕಿನಲ್ಲಿ ಹಾಸುಹೊಕ್ಕಾಗಿದೆ: ಸುಧಾಕರ್ ಶೆಟ್ಟಿ

Update: 2019-04-21 16:58 GMT

ಬೆಂಗಳೂರು, ಎ.21: ಆಧುನಿಕ ಜೀವನದ ನಡುವೆಯು ಕರಾವಳಿ ಸಂಸ್ಕೃತಿ, ಸಂಪ್ರದಾಯ, ಉಡುಗೆ ತೊಡುಗೆಗಳು ತುಳು ನಾಡಿಗರ ಬದುಕಿನಲ್ಲಿ ಹಾಸುಹೊಕ್ಕಾಗಿದೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ತಿಳಿಸಿದರು.

ರವಿವಾರ ದಕ್ಷಿಣ ಕನ್ನಡಿಗರ ಸಂಘ ನಗರದ ಎಫ್‌ಕೆಸಿಸಿಐನ ಸಭಾಂಗಣದಲ್ಲಿ ಆಯೋಜಿಸಿದ್ದ ಯುಗಾದಿ ಸಂಭ್ರಮ ಹಾಗೂ ವಜ್ರ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕರಾವಳಿ ಮೂಲದ ಅನೇಕ ಸಂಘಟನೆಗಳು ತುಳುನಾಡಿನ ಸಂಸ್ಕೃತಿಯನ್ನು ಯುವ ತಲೆಮಾರಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ವೆುಚ್ಚುಗೆ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡದಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿ ಆಗಬೇಕಾಗಿದೆ. ಇಲ್ಲಿನ ವಿವಿಧ ಪ್ರದೇಶಗಳಿಗೆ ರೈಲು ಸಂಪರ್ಕ ಇಲ್ಲ. ಕೈಗಾರಿಕೆಗೆ ಅವಶ್ಯವಿರುವ ಭೂಮಿಯಿಲ್ಲ. ಪ್ರವಾಸೋದ್ಯಮವು ಹೆಚ್ಚಿನದಾಗಿ ಅಭಿವೃದ್ಧಿಯಾಗಿಲ್ಲ. ಇವೆಲ್ಲವುಗಳನ್ನು ಆದ್ಯತೆ ಮೇರೆಗೆ ಅಭಿವೃದ್ಧಿ ಪಡಿಸಬೇಕೆಂದು ಎಫ್‌ಕೆಸಿಸಿಐ ವತಿಯಿಂದ ಹಲವು ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಎಫ್‌ಕೆಸಿಸಿಐಯನ್ನು 103 ವರ್ಷಗಳ ಹಿಂದೆ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಸ್ಥಾಪಿಸಿದರು. ವಾಣಿಜ್ಯ ಮತ್ತು ಉದ್ದಿಮೆದಾರರ ಶ್ರೇಯೋಭಿವೃದ್ಧಿಗಾಗಿ ಸ್ಥಾಪಿಸಲ್ಪಟ್ಟಿರುವ ಒಂದು ಅಪಿಕ್ಸ್ ಸಂಸ್ಥೆಯಾಗಿದೆ. ಅಂದಿನಿಂದ ಇಂದಿನವರೆಗೂ ರಾಷ್ಟ್ರದ ಹಾಗೂ ರಾಜ್ಯದ ಅರ್ಥಿಕಾಭಿವೃದ್ದಿಯನ್ನು ಹೆಚ್ಚಿಸುವಲ್ಲಿ ಹಾಗೂ ಅರ್ಥಿಕ ಚಟುವಟಿಕೆಗಳನ್ನು ಪ್ರಾರಂಭಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಾ ಬಂದಿದೆ ಎಂದು ಅವರು ಹೇಳಿದರು.

ಸದ್ಯ ಎಫ್‌ಕೆಸಿಸಿಐನಲ್ಲಿ 3 ಸಾವಿರ ಸದಸ್ಯರಿದ್ದು, ರಾಜ್ಯದ ತುಂಬೆಲ್ಲಾ ಸುಮಾರು 3 ಲಕ್ಷ ಜನರಿಗೆ ಪರೋಕ್ಷವಾಗಿ ಸುಮಾರು 26 ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಗಳು ಹಾಗೂ 139 ವಿವಿಧ ಸಂಘ ಸಂಸ್ಥೆಗಳು ಎಫ್‌ಕೆಸಿಸಿಐನ ಸದಸ್ಯತ್ವವನ್ನು ಪಡೆದುಕೊಂಡು ಹಲವು ಬಗೆಯ ಪ್ರಯೋಜನವನ್ನು ಪಡೆಯುತ್ತಿವೆ ಎಂದು ಅವರು ಹೇಳಿದರು.

ಈ ವೇಳೆ ಯಕ್ಷಕರ್ದಮ ಬೆಂಗಳೂರು ಕಲಾವಿದರಿಂದ ಶೂರ್ಪನಖ ಗರ್ವಭಂಗ ಯಕ್ಷಗಾನ ತಾಳಮದ್ದಲೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ವೇದಿಕೆಯಲ್ಲಿ ಯಕ್ಷಗಾನ ಕಲಾವಿದ ಶ್ರೀನಿವಾಸ ಸಾಸ್ತಾನ, ಹೋಟೆಲ್ ಉದ್ಯಮಿ ನಾರಾಯಣರಾವ್, ಸೆಂಚುರಿ ಗ್ರೂಪ್‌ನ ಡಾ.ಪಿ.ದಯಾನಂದ ಪೈ, ಎಂಆರ್‌ಜಿ ಗ್ರೂಪ್‌ನ ಪ್ರಕಾಶ್ ಶೆಟ್ಟಿ ಸೇರಿ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News