ಯೂತ್ ವಿಶ್ವದಾಖಲೆ ಮುರಿದ ಜೆರೆಮಿ

Update: 2019-04-21 18:31 GMT

ನಿಂಗ್ಬೊ(ಚೀನಾ), ಎ.21: ಯೂತ್ ಒಲಿಂಪಿಕ್ಸ್ ಚಾಂಪಿಯನ್ ಜೆರೆಮಿ ಲಾಲ್‌ರಿನ್ನುಂಗಾ ಏಶ್ಯನ್ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ರವಿವಾರ ಅತ್ಯುತ್ತಮ ಪ್ರದರ್ಶನ ನೀಡಿ ಶುಭಾರಂಭ ಮಾಡಿದ್ದಾರೆ. ಈ ವೇಳೆ ಅವರು ಯೂತ್ ವಿಶ್ವ ದಾಖಲೆ ಮುರಿದು ಗಮನ ಸೆಳೆದರು.

ಅಮೋಘ ಪ್ರದರ್ಶನ ನೀಡಿದ 16ರ ಹರೆಯದ ವೇಯ್ಟಲಿಫ್ಟರ್ ಜೆರೆಮಿ ಪುರುಷರ 67 ಕೆಜಿ ಸ್ಫರ್ಧೆಯ ಬಿ ಗುಂಪಿನಲ್ಲಿ ಒಟ್ಟು 297 ಕೆಜಿ ತೂಕ ಎತ್ತಿ ಹಿಡಿಯು ವುದರೊಂದಿಗೆ ಸ್ನಾಚ್, ಕ್ಲೀನ್ ಹಾಗೂ ಜರ್ಕ್‌ನಲ್ಲಿ ಯೂತ್‌ವರ್ಲ್ಡ್ ಹಾಗೂ ಏಶ್ಯನ್ ರೆಕಾರ್ಡ್ಸ್ ನ್ನು ಮುರಿದರು. ಬಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದರು. ಪಾಕ್‌ನ ತಲ್ಹಾ ತಾಲಿಬ್ 304 ಕೆಜಿ ತೂಕ ಎತ್ತಿ ಹಿಡಿದು ಮೊದಲ ಸ್ಥಾನ ಪಡೆದಿದ್ದಾರೆ.

ಜೆರೆಮಿ ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಒಟ್ಟು 15 ದಾಖಲೆಗಳನ್ನು ಮುರಿದಿದ್ದಾರೆ. ಮೂರು ಯೂತ್ ವರ್ಲ್ಡ್ ಹಾಗೂ ಮೂರು ಯೂತ್ ಏಶ್ಯನ್ ಸಹಿತ ಆರು ಅಂತರ್‌ರಾಷ್ಟ್ರೀಯ ದಾಖಲೆಗಳು, ಮೂರು ಯೂತ್ ನ್ಯಾಶನಲ್, ಮೂರು ಜೂನಿಯರ್ ನ್ಯಾಶನಲ್ ಹಾಗೂ ಮೂರು ಸೀನಿಯರ್ ನ್ಯಾಶನಲ್ ಸಹಿತ 9 ರಾಷ್ಟ್ರೀಯ ದಾಖಲೆಗಳನ್ನು ಮುರಿದಿದ್ದಾರೆ.

ಮಿರೆರಾಂ ವೇಯ್ಟಲಿಫ್ಟರ್ ಜೆರೆಮಿ ಸ್ನಾಚ್‌ನ 3ರಲ್ಲಿ ಎರಡು ಪ್ರಯತ್ನದಲ್ಲಿ (130ಕೆಜಿ,134 ಕೆಜಿ)ನೂತನ ಯೂತ್ ವಿಶ್ವದಾಖಲೆ ನಿರ್ಮಿಸಿದರು. ಈ ಮೊದಲು ಯೂತ್ ವರ್ಲ್ಡ್ ರೆಕಾರ್ಡ್ ಜೆರೆಮಿ ಹೆಸರಲ್ಲೇ ಇತ್ತು. ಫೆಬ್ರವರಿಯಲ್ಲಿ ಥಾಯ್ಲೆಂಡ್‌ನಲ್ಲಿ ನಡೆದ ಎಜಿಎಟಿ ಕಪ್‌ನಲ್ಲಿ 131 ಕೆಜಿ ತೂಕ ಎತ್ತಿಹಿಡಿದು ಈ ಸಾಧನೆ ಮಾಡಿದ್ದರು. ಜೆರೆಮಿ ಎರಡು ಯಶಸ್ವಿ ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ ತನ್ನ ತೂಕಕ್ಕಿಂತ ಎರಡು ಪಟ್ಟು ಹೆಚ್ಚು ತೂಕ ಎತ್ತಿಹಿಡಿದರು. ಈ ವೇಳೆ ಅವರು ಕಝಕ್‌ಸ್ತಾನದ ವೇಯ್ಟಾ ಲಿಫ್ಟರ್ ಸೈಖಾನ್ ತೈಸುಯೆವ್ ಅವರ ಯೂತ್ ವರ್ಲ್ಡ್ ರೆಕಾರ್ಡ್(161ಕೆಜಿ)ಮುರಿದರು. ಒಲಿಂಪಿಕ್ಸ್ ಗೇಮ್ಸ್ ಹಾಗೂ ಇತರ ಸ್ಪರ್ಧೆಗಳಲ್ಲಿ ತೂಕ ವಿಭಾಗಗಳಲ್ಲಿ ಅಂತರ್‌ರಾಷ್ಟ್ರೀಯ ಒಕ್ಕೂಟ ಬದಲಾವಣೆ ಮಾಡಿದ ಬಳಿಕ ಜೆರೆಮಿ 67 ಕೆಜಿ ವಿಭಾಗದಲ್ಲಿ ಎರಡನೇ ಬಾರಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿದ್ದಾರೆ.

ಜೆರೆಮಿ 67 ಕೆಜಿ ವಿಭಾಗದ ಸ್ನಾಚ್, ಕ್ಲೀನ್ ಆ್ಯಂಡ್ ಜರ್ಕ್‌ನ ಒಟ್ಟು ತೂಕದಲ್ಲಿ ರಾಷ್ಟ್ರೀಯ ಸೀನಿಯರ್ ದಾಖಲೆಯನ್ನು ಮುರಿದಿದ್ದಾರೆ. ತನ್ನದೇ ಸ್ನಾಚ್ ದಾಖಲೆ(131ಕೆಜಿ)ಮುರಿದಿದ್ದಾರೆ. ಗುಲಾಮ್ ನವಿ ಅವರ 160 ಕೆಜಿ ಕ್ಲೀನ್ ಆ್ಯಂಡ್ ಜರ್ಕ್ ದಾಖಲೆಯನ್ನು ಮುರಿದರು. ಒಟ್ಟು 288 ಕೆಜಿ ಎತ್ತಿ ಹಿಡಿದು ದಾಖಲೆ ನಿರ್ಮಿಸಿದರು.

ಜೆರೆಮಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದ ಬ್ಯುನಸ್‌ಐರಿಸ್‌ಯೂತ್ ಒಲಿಂಪಿಕ್ಸ್‌ನ 62 ಕೆಜಿ ತೂಕ ವಿಭಾಗದಲ್ಲಿ ಒಟ್ಟು 274 ಕೆಜಿ(124+150)ತೂಕ ಎತ್ತಿ ಹಿಡಿದು ಚಿನ್ನದ ಪದಕ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News