ಶ್ರೀಲಂಕಾ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಕನ್ನಡಿಗರು ಮೃತ್ಯು, ಐವರು ನಾಪತ್ತೆ

Update: 2019-04-22 06:52 GMT

ಬೆಂಗಳೂರು, ಎ.22: ಶ್ರೀಲಂಕಾದಲ್ಲಿ ರವಿವಾರ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಇಬ್ಬರು ಕನ್ನಡಿಗರು ಮೃತಪಟ್ಟಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೊಲಂಬೊದಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಸಿಲುಕಿ ಇಬ್ಬರು ಕನ್ನಡಿಗರಾದ ಕೆ.ಜಿ.ಹನುಮಂತರಾಯಪ್ಪ ಹಾಗೂ ರಂಗಪ್ಪ ಎಂಬವರು ಸಾವನ್ನಪ್ಪಿರುವುದನ್ನು ವಿದೇಶಾಂಗ ಸಚಿವ ಸುಶ್ಮಾ ಸ್ವರಾಜ್ ದೃಢಪಡಿಸಿದ್ದಾರೆ. ಇದು ತನಗೆ ತೀವ್ರ ಆಘಾತ ತಂದಿದೆ ಎಂದು ಹೇಳಿದ್ದಾರೆ.

ಇದಲ್ಲದೆ ಇನ್ನೂ ಐವರು ಕನ್ನಡಿಗರು ನಾಪತ್ತೆಯಾಗಿರುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ.
 ರಾಜ್ಯ ಜೆಡಿಎಸ್ ಕಾರ್ಯಕರ್ತರ ಏಳು ಮಂದಿಯ ತಂಡ ಕೊಲಂಬೊ ಪ್ರವಾಸ ತೆರಳಿತ್ತು. ನಿನ್ನೆ ಬಾಂಬ್ ಸ್ಫೋಟ ಸಂಭವಿಸಿದ ಬಳಿಕ ಈ ತಂಡ ನಾಪತ್ತೆಯಾಗಿದ್ದು, ಅವರ ಬಗ್ಗೆ ಯಾವುದೇ ಮಾಹಿತಿ ಇಲ್ಲವಾಗಿದೆ. ಇದೀಗ ಈ ಪೈಕಿ ಹನುಮಂತರಾಯಪ್ಪ ಹಾಗೂ ರಂಗಪ್ಪ ಎಂಬವರು ಮೃತಪಟ್ಟಿರುವುದನ್ನು ವಿದೇಶಾಂಗ ಸಚಿವಾಲಯ ದೃಢಪಡಿಸಿದೆ. ಉಳಿದವರ ಪತ್ತೆ ಹಚ್ಚುವ ಕುರಿತಂತೆ ಭಾರತ ರಾಯಭಾರ ಕಚೇರಿ ಜೊತೆ ತಾನು ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News