ಸಚಿವರ ಬೆಂಗಾವಲು ಪಡೆ ವಾಹನದಲ್ಲಿ ಹಣ ಪತ್ತೆ ಪ್ರಕರಣ; ಚುನಾವಣಾ ಆಯೋಗಗಕ್ಕೆ ಐಎಎಸ್ ಅಧಿಕಾರಿ ಪತ್ರ

Update: 2019-04-22 12:47 GMT

ಬೆಂಗಳೂರು, ಎ.22: ಸಚಿವ ಎಚ್.ಡಿ.ರೇವಣ್ಣ ಅವರ ಬೆಂಗಾವಲು ಪಡೆ ವಾಹನ ಹಾಸನದಲ್ಲಿ ಸಂಚರಿಸುವಾಗ ಹಣ ಪತ್ತೆಯಾಗಿರುವ ಸಂಬಂಧ ಐಎಎಸ್ ಅಧಿಕಾರಿ ಮನೀಶ್ ಮೌದ್ಗಿಲ್ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಮೌದ್ಗಿಲ್ ಅವರು, ಲೋಕಸಭಾ ಚುನಾವಣೆಗೆ ತಮ್ಮನ್ನು ವಿಶೇಷಾಧಿಕಾರಿಯಾಗಿ ನೇಮಿಸಲಾಗಿತ್ತು. ಈ ಹಿನ್ನೆಲೆ ಇದೇ ತಿಂಗಳ 17 ರಂದು ನಾನು ಹಾಸನ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾರಿನಲ್ಲಿ ಸಾಗಿಸಲಾಗುತ್ತಿದ್ದ 1.2 ಲಕ್ಷ ರೂ. ನಗದು ಅನ್ನು ಆದಾಯ ತೆರಿಗೆ ಇಲಾಖಾಧಿಕಾರಿಗಳು ದಾಳಿ ನಡೆಸಿ, ಜಪ್ತಿ ಮಾಡಿದ್ದರು.

ಅಲ್ಲದೇ, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೆಕ್ಷನ್ 171 ಸಿ ಅಡಿಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಮಾಹಿತಿಯನ್ನು ಹಾಸನ ಜಿಲ್ಲಾ ಎಸ್ಪಿ ತಮ್ಮ ಗಮನಕ್ಕೆ ತಂದಿದ್ದರು. ತನಿಖೆ ನಡೆಸಿದಾಗ ಈ ವಾಹನ ಪೊಲೀಸ್ ಇಲಾಖೆಗೆ ಸೇರಿದ್ದು ಎಂದು ತಿಳಿದು ಬಂದಿದೆ.

ಎಎಆರ್ ಹೆಡ್ ಕ್ವಾರ್ಟ್‌ನ ಡಿಸಿಪಿಯೊಬ್ಬರಿಗೆ ಈ ವಾಹನ ಸೇರಿದೆ ಎಂದು ತಿಳಿದು ಬಂದಿದೆ. ಚುನಾವಣೆಗೆ ಹಣ ಹಂಚಲು ಈ ರೀತಿ ಪೊಲೀಸ್ ಇಲಾಖೆಯ ವಾಹನ ಬಳಸಿಕೊಂಡಿದ್ದು ಎಷ್ಟು ಸರಿ.ಒಂದು ವೇಳೆ ಇದು ಪೊಲೀಸ್ ಇಲಾಖೆಯದ್ದೇ ಆಗಿದ್ದರೆ ಕಾನೂನು ಅಡಿಯಲ್ಲಿ ಶಿಕ್ಷೆಯಾಗಬೇಕು. ಜೊತೆಗೆ ಈ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News