ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಪೋಟ; ಉಪರಾಷ್ಟ್ರಪತಿ ಖಂಡನೆ

Update: 2019-04-22 15:00 GMT

ಬೆಂಗಳೂರು, ಎ.22: ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ದುರ್ಘಟನೆಯನ್ನು ಖಂಡಿಸಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಭಯೋತ್ಪಾದನೆ ಮುಕ್ತ ಸಮಾಜ ಕಟ್ಟಲು ಒಗ್ಗೂಡಬೇಕೆಂದು ಕರೆ ನೀಡಿದರು.

ಸೋಮವಾರ ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ 54ನೇ ಘಟಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಭಾರತ ಮಾತ್ರವಲ್ಲದೆ, ಯಾವುದೇ ದೇಶ ಇಂದಿನ ವಾತಾವರಣದಲ್ಲಿ ಸುರಕ್ಷಿತವಾಗಿಲ್ಲ. ಹೀಗಾಗಿ, ಭಯೋತ್ಪಾದನೆ ನಿಗ್ರಹ ಮಾಡುವ ಜೊತೆಗೆ, ಇದಕ್ಕೆ ಬೆಂಬಲವಾಗಿ ನಿಂತಿರುವ ದುಷ್ಟ ಶಕ್ತಿಗಳಿಗೂ ಕಡಿವಾಣ ಹಾಕಬೇಕು ಎಂದು ನುಡಿದರು.

ಶ್ರೀಲಂಕಾದಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡೇ ಭಯೋತ್ಪಾದಕರು ದಾಳಿ ನಡೆಸಿದ್ದಾರೆ ಎಂದವರು, ಬೆಂಗಳೂರು, ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳನ್ನು ಭಯೋತ್ಪಾದಕರು ಗುರಿಯಾಗಿಸಿಕೊಂಡಿದ್ದಾರೆ. ಹಾಗಾಗಿ, ಯುವ ಜನಾಂಗ ಎಚ್ಚೆತ್ತುಕೊಳ್ಳಬೇಕು ಎಂದು ಅವರು ತಿಳಿಸಿದರು.

ಇಂದಿನ ಯುವ ಜನಾಂಗಕ್ಕೆ ವಿದೇಶಿ ತಿಂಡಿಗಳ ಮೇಲೆ ಆಸೆ ಹೆಚ್ಚಾಗುತ್ತಿದೆ. ಆದರೆ. ನಮ್ಮಲ್ಲಿಯೇ ಆರೋಗ್ಯಕರ ಊಟ, ಆಹಾರ ದೊರೆಯುತ್ತದೆ. ಜಂಕ್ ಫುಡ್ ಸೇವನೆಯಿಂದ ಆರೋಗ್ಯ ಉತ್ತಮವಾಗಿರುವುದಿಲ್ಲ ಎಂದು ವೆಂಕಯ್ಯ ನಾಯ್ಡು ಸಲಹೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News