ಎಲ್ಲ ಆಟಗಾರರಿಗೆ ನಾಲ್ಕುದಿನ ವಿಶ್ರಾಂತಿ ನೀಡಿದ ಮುಂಬೈ

Update: 2019-04-22 18:31 GMT

ಹೊಸದಿಲ್ಲಿ, ಎ.22: ಟೂರ್ನಮೆಂಟ್‌ನ ಅಂತ್ಯದಲ್ಲಿ ಮತ್ತಷ್ಟು ಹುರುಪಿನಿಂದ ಆಡುವಂತಾಗಲು ಮುಂಬೈ ಇಂಡಿಯನ್ಸ್ ತಂಡ ತನ್ನ ಎಲ್ಲಾ ಆಟಗಾರರಿಗೆ ನಾಲ್ಕು ದಿನಗಳ ವಿಶ್ರಾಂತಿ ನೀಡಿದ್ದು, ಆಟಗಾರರು ತಮ್ಮ ಕುಟುಂಬ ಸದಸ್ಯರೊಂದಿಗೆ ಸಮಯ ಕಳೆದು ನಿರಾಳವಾಗಲು ಅವಕಾಶ ನೀಡಿದೆ. 12ನೇ ಆವೃತ್ತಿಯ ಐಪಿಎಲ್ ಮುಗಿದ ಬೆನ್ನಿಗೇ 2019ರ ವಿಶ್ವಕಪ್ ಆರಂಭವಾಗಲಿದೆ. ಆಟಗಾರರ ಕೆಲಸದ ಭಾರ ತಗ್ಗಿಸುವ ಅಗತ್ಯವಿದೆ ಎಂದು ಭಾರತ ನಾಯಕ ವಿರಾಟ್ ಕೊಹ್ಲಿ ಪದೇ ಪದೇ ಹೇಳುತ್ತಾರೆ.

ಐಪಿಎಲ್‌ನಲ್ಲಿ ಚೆನ್ನೈ ಹೊರತುಪಡಿಸಿ ಮುಂಬೈ ತಂಡದಲ್ಲಿ ಮಾತ್ರ ವಿಶ್ವಕಪ್ ಆಡಲಿರುವ ಮೂವರು ಆಟಗಾರರಿದ್ದಾರೆ. ಅವರುಗಳೆಂದರೆ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಹಾಗೂ ಜಸ್‌ಪ್ರಿತ್ ಬುಮ್ರಾ. ಮುಂಬೈ ಫ್ರಾಂಚೈಸಿ ದ್ವಿತೀಯಾರ್ಧದ ಐಪಿಎಲ್ ಹಾಗೂ ವಿಶ್ವಕಪ್‌ನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಹೆಜ್ಜೆ ಇಟ್ಟಿದೆ.

ಎ.20 ರಂದು ರಾಜಸ್ಥಾನ ವಿರುದ್ಧ ಪಂದ್ಯದ ಬಳಿಕ ಆಟಗಾರರಿಗೆ ತಮ್ಮ ಮನೆಗೆ ಹೋಗಲು ಅವಕಾಶ ನೀಡಲು ಮುಂಬೈ ಫ್ರಾಂಚೈಸಿ ನಿರ್ಧರಿಸಿತ್ತು. ಆಟಗಾರರು ಎ.25 ರಂದು ಸಿಎಸ್‌ಕೆ ವಿರುದ್ಧ ಪಂದ್ಯಕ್ಕಿಂತ ಮೊದಲು ಒಟ್ಟಿಗೆ ಸೇರಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News