‘ಬಿ’ ಗುಂಪಿನಲ್ಲಿ ಅಜಯ್ ಸಿಂಗ್ ಅಗ್ರಸ್ಥಾನಿ

Update: 2019-04-22 18:37 GMT

ನಿಂಗ್ಬೊ (ಚೀನಾ), ಎ.22: ಭಾರತದ ವೇಯ್ಟೊಲಿಫ್ಟರ್‌ಗಳಾದ ಅಜಯ್‌ಸಿಂಗ್ ಹಾಗೂ ಅಚಿಂತ ಶೆವುಲಿ ಏಶ್ಯನ್ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನ ಸುಲಭದ ಗುಂಪು ‘ಬಿ’ನಲ್ಲಿ ಸೋಮವಾರ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.

‘ಬಿ’ ಗುಂಪಿನ ಒಟ್ಟು ನಾಲ್ಕು ಮಂದಿ ಫೈನಲಿಸ್ಟ್‌ಗಳಲ್ಲಿ ಏಶ್ಯನ್ ಯೂತ್ ಹಾಗೂ ಜೂನಿಯರ್ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನ ಕಂಚು ವಿಜೇತ ಅಜಯ್ (81 ಕೆಜಿ ವಿಭಾಗ) ಒಟ್ಟು 320 ಕೆಜಿ ಭಾರ (142+178) ಎತ್ತುವ ಮೂಲಕ ಅಗ್ರ ಸ್ಥಾನಿಯಾದರು. ಮಂಗಳವಾರ ನಡೆಯುವ ‘ಎ’ ಗುಂಪಿನ ಪಂದ್ಯಗಳ ಫಲಿತಾಂಶದ ಬಳಿಕ ಅಜಯ್‌ರ ಫೈನಲ್ ಸ್ಥಾನವನ್ನು ನಿರ್ಧರಿಸಲಾಗುತ್ತದೆ.

ಇನ್ನು ರಾಷ್ಟ್ರೀಯ ಚಾಂಪಿಯನ್ ಅಚಿಂತ ‘ಬಿ’ ಗುಂಪಿನ 77 ಕೆಜಿ ವಿಭಾಗದಲ್ಲಿ ಒಟ್ಟು 297 ಕೆಜಿ (137 ಕೆಜಿ ಸ್ನಾಚ್ ಹಾಗೂ 160 ಕೆಜಿ ಕ್ಲೀನ್ ಆ್ಯಂಡ್ ಜರ್ಕ್) ಭಾರ ಎತ್ತುವ ಮೂಲಕ ಮೂರನೇ ಸ್ಥಾನಿಯಾದರು. 18 ವರ್ಷದ ಭಾರತದ ಸ್ಪರ್ಧಿ ಅಚಿಂತ, ಇಂಡೋನೇಶ್ಯದ ರಹಮತ್‌‘ಇರ್ವಿನ್ ಅಬ್ದುಲ್ಲಾ (ಒಟ್ಟು 312 ಕೆಜಿ )ಹಾಗೂ ವಿಯೆಟ್ನಾಂನ ಫಾಮ್ ತುವಾನ್ ಆನ್ (ಒಟ್ಟು 304 ಕೆಜಿ) ಬಳಿಕದ ಸ್ಥಾನ ಪಡೆದರು. ಈವರೆಗೆ ಟೂರ್ನಿಯಲ್ಲಿ ಪದಕ ಗೆದ್ದ ಏಕೈಕ ಭಾರತೀಯರೆಂದರೆ: ಜಿಲ್ಲಿ ದಲಬೆಹೆರಾ. ಒಡಿಶಾ ಮೂಲದ ಜಿಲ್ಲಿ, ಮಹಿಳೆಯರ 45 ಕೆಜಿ ವಿಭಾಗದಲ್ಲಿ 162 ಕೆಜಿ(71 ಕೆಜಿ + 91 ಕೆಜಿ)ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಆದರೂ ಇದು ಒಲಿಂಪಿಕ್ಸ್ ಅಲ್ಲದ ವಿಭಾಗವಾಗಿದೆ.

ಏಶ್ಯನ್ ವೇಯ್ಟಲಿಫ್ಟಿಂಗ್ ಚಾಂಪಿಯನ್‌ಶಿಪ್2020ರ ಟೋಕಿಯೊ ಒಲಿಂಪಿಕ್ಸ್ ಗೇಮ್ಸ್ ಗೆ ಒಂದು ಚಿನ್ನದ ಪದಕ ಮಟ್ಟದ ಅರ್ಹತಾ ಟೂರ್ನಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News