ಬಾಲಿವುಡ್ ನಟ ಸನ್ನಿ ಡಿಯೋಲ್ ಬಿಜೆಪಿಗೆ ಸೇರ್ಪಡೆ

Update: 2019-04-23 07:23 GMT

ಹೊಸದಿಲ್ಲಿ, ಎ.23: ಬಾಲಿವುಟ್ ನಟ ಸನ್ನಿ ಡಿಯೋಲ್ ಮಂಗಳವಾರ ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಯಾಗಿದ್ದು, ನರೇಂದ್ರ ಮೋದಿ ಮತ್ತೊಮ್ಮೆ ಭಾರತದ ಪ್ರಧಾನಿಯಾಗುವ ಅಗತ್ಯವಿದೆ ಎಂದರು.

 ‘‘ನನ್ನ ತಂದೆ(ಚಿತ್ರತಾರೆ ಧರ್ಮೇಂದ್ರ)ಅಟಲ್‌ಜಿಗೆ ಪ್ರಭಾವಿತರಾದ್ದಂತೆ ಇಂದು ನಾನು ಮೋದಿಜಿಗೆ ಮನಸೋತು ಬಿಜೆಪಿಗೆ ಸೇರುತ್ತಿದ್ದೇನೆ. ಬಿಜೆಪಿಗೆ ಎಷ್ಟು ಕೊಡುಗೆ ನೀಡಬೇಕೋ ಅಷ್ಟು ನೀಡುವೆ. ನಾನು ಮಾತನಾಡಲಾರೆ. ಕೆಲಸ ಮಾಡಿ ತೋರುತ್ತೇನೆ’’ ಎಂದು ಡಿಯೋಲ್ ಪ್ರತಿಕ್ರಿಯಿಸಿದರು.

ಮೂಲಗಳ ಪ್ರಕಾರ ಡಿಯೋಲ್ ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಚಂಡಿಗಢ ಅಥವಾ ಗುರುದಾಸ್‌ಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಯಿದೆ. ಈ ಕುರಿತು ಇನ್ನಷ್ಟೇ ಬಿಜೆಪಿಯಿಂದ ಅಧಿಕೃತ ಘೋಷಣೆಯಾಗಬೇಕಾಗಿದೆ. ಬಿಜೆಪಿ ಪಕ್ಷದ ಹಿರಿಯ ನಾಯಕಿ ನಿರ್ಮಲಾ ಸೀತಾರಾಮನ್ ನಟ ಸನ್ನಿ ಡಿಯೋಲ್‌ರನ್ನು ಪಕ್ಷಕ್ಕೆ ಸ್ವಾಗತಿಸಿದರು. ನಮ್ಮ ಪಕ್ಷಕ್ಕೆ ಫೈಯರ್‌ಬ್ರಾಂಡ್ ನಟನನ್ನು ಸ್ವಾಗತಿಸಲು ಸಂತೋಷವಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News