ಸೌದಿ ಅರೇಬಿಯಾ: 37 ಭಯೋತ್ಪಾದನೆ ಅಪರಾಧಿಗಳ ಶಿರಚ್ಛೇದ

Update: 2019-04-23 14:05 GMT

ಹೊಸದಿಲ್ಲಿ, ಎ.23: ಸೌದಿ ಅರೇಬಿಯಾ ಸರಕಾರವು ‘ಭಯೋತ್ಪಾದನೆ’ ಅಪರಾಧಿಗಳಾದ 37 ಜನರ ಶಿರಚ್ಛೇದ ನಡೆಸಿದೆ ಎಂದು ಆಂತರಿಕ ಸಚಿವಾಲಯ ತಿಳಿಸಿದ್ದಾಗಿ ವರದಿಯಾಗಿದೆ. ರಿಯಾದ್, ಮಕ್ಕಾ ಮತ್ತು ಮದೀನಾಗಳಲ್ಲಿ ಈ ಶಿಕ್ಷೆ ನೀಡಲಾಗಿದೆ.

ಸೌದಿ ಅರೇಬಿಯಾದಲ್ಲಿ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಇಬ್ಬರು ಪಂಜಾಬ್ ಮೂಲದ ವ್ಯಕ್ತಿಗಳ ಶಿರಚ್ಛೇದ ನಡೆಸಿದ ಕೆಲದಿನಗಳ ನಂತರ ಈ ಶಿಕ್ಷೆ ವಿಧಿಸಲಾಗಿದೆ. ತಮ್ಮ ಜೊತೆಗಾರನೊಬ್ಬನನ್ನು ಕೊಲೆಗೈದ ಪ್ರಕರಣದಲ್ಲಿ ಸತ್ವಿಂದರ್ ಸಿಂಗ್ ಮತ್ತು ಹರ್ಜೀತ್ ಸಿಂಗ್ ಎಂಬವರ ತಲೆ ಕಡಿಯಲಾಗಿತ್ತು.

‘ಉಗ್ರ ಮತ್ತು ತೀವ್ರಗಾಮಿ ಚಿಂತನೆಗಳನ್ನು ಅಳವಡಿಸಿಕೊಂಡದ್ದಕ್ಕಾಗಿ ಮತ್ತು ಉಗ್ರ ಘಟಕಗಳನ್ನು ರಚಿಸಿದ್ದಕ್ಕಾಗಿ’ ಇದೀಗ 37 ಮಂದಿಯ ಶಿರಚ್ಛೇದ ನಡೆಸಲಾಗಿದೆ ಎಂದು ಸರಕಾರಿ ಪ್ರಕಟನೆ ತಿಳಿಸಿದ್ದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News