ಲಂಚಕ್ಕೆ ಬೇಡಿಕೆ ಆರೋಪ: ಬೆಸ್ಕಾಂ ಎಇಇ ಎಸಿಬಿ ಬಲೆಗೆ

Update: 2019-04-24 17:08 GMT

ಬೆಂಗಳೂರು, ಎ.24: ಗೃಹಬಳಕೆ ವಿದ್ಯುತ್ ಮೀಟರ್‌ನ ವಾಣಿಜ್ಯ ಬಳಕೆಗೆ ಪರಿವರ್ತಿಸಲು ಲಂಚಕ್ಕೆ ಬೇಡಿಕೆ ಇಟ್ಟ ಆರೋದಪಡಿ ಬೆಸ್ಕಾಂ ಎಇಇ ಹಾಗೂ ಮೀಟರ್ ರೀಡರ್ ಶಿವು ಎಂಬುವವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಕಗ್ಗದಾಸನಪುರದ ಭುವನೇಶ್ವರಿ ನಗರದ ಮನೆಯೊಂದಕ್ಕೆ ಗೃಹಬಳಕೆ ವಿದ್ಯುತ್ ಮೀಟರ್‌ನ ವಾಣಿಜ್ಯ ಬಳಕೆಗೆ ಪರಿವರ್ತಿಸಲು 1.10 ಲಕ್ಷ ರೂ.ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಬುಧವಾರ ಕಚೇರಿ ಬಳಿಯ ಭುವನೇಶ್ವರಿ ದೇವಾಲಯ ಬಳಿ 1.1 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಬಂಧಿತ ಶಿವು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು ಗುತ್ತಿಗೆ ಆಧಾರದ ಮೇರೆಗೆ ಮೀಟರ್ ರೀಡರ್ ಆಗಿ ಕೆಲಸ ಮಾಡುತ್ತಿದ್ದ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದು, ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News