ಆಡಿಯೋ ವೈರಲ್: ಪರಮೇಶ್ವರ್ ಬೆಂಬಲಿಗ ದರ್ಶನ್ ಪಕ್ಷದಿಂದ ಅಮಾನತು

Update: 2019-04-26 14:28 GMT

ಬೆಂಗಳೂರು, ಎ. 26: ನಾಮಪತ್ರ ಹಿಂಪಡೆಯಲು ಸಂಸದ ಮುದ್ದಹನುಮೇಗೌಡ ಹಣ ಪಡೆದಿದ್ದಾರೆಂಬ ಆಡಿಯೋ ತುಣುಕನ್ನು ವೈರಲ್ ಮಾಡಿದಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬೆಂಬಲಿಗ ದರ್ಶನ್‌ನನ್ನು ಅಮಾನತು ಮಾಡಿ ಕೆಪಿಸಿಸಿ ಆದೇಶ ಹೊರಡಿಸಿದೆ.

ತುಮಕೂರು ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ದೇವೇಗೌಡರ ವಿರುದ್ಧ ಸ್ಪರ್ಧಿಸಿದ್ದ ಮುದ್ದ ಹನುಮೇಗೌಡ 3.5 ಕೋಟಿ ರೂ.ಹಣ ಪಡೆದಿದ್ದು, ಇದರ ಮಧ್ಯವರ್ತಿಯಾಗಿ ಕೆಲಸ ಮಾಡಿದ ಮಾಜಿ ಶಾಸಕ ಕೆ.ಎನ್.ರಾಜಣ್ಣ ಕೂಡ ಇಷ್ಟೆ ಹಣ ಪಡೆದಿದ್ದಾರೆ ಎಂಬ ಬಗ್ಗೆ ದರ್ಶನ್ ಕಾರ್ಯಕರ್ತರೊಂದಿಗೆ ಫೋನ್ ಸಂಭಾಷಣೆ ನಡೆಸಿದ್ದರು.

ಆ ಆಡಿಯೋ ಜಿಲ್ಲೆಯಲ್ಲಿ ಭಾರಿ ವೈರಲ್ ಆಗಿತ್ತು. ಆ ಮೂಲಕ ಪಕ್ಷದ ಮುಖಂಡರಿಗೆ ತೀವ್ರ ಮುಜುಗರ ಸೃಷ್ಟಿಸಿದ್ದರು. ಕೆಪಿಸಿಸಿ ಸೋಶಿಯಲ್ ಮೀಡಿಯಾ ವಿಭಾಗದ ಸಂಚಾಲಕನಾಗಿದ್ದ ದರ್ಶನ್ ಎಂಬವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News