ಫೈಲ್ ಕಳವು ಪ್ರಕರಣ: ಪೊಲೀಸ್ ಪೇದೆ ವಿರುದ್ಧ ದೂರು

Update: 2019-04-27 16:26 GMT

ಬೆಂಗಳೂರು, ಎ.27: ಮಣಿಪಾಲ್ ಕಂಪೆನಿಯಲ್ಲಿ ನಡೆದಿದ್ದ ಎನ್ನಲಾದ 60 ಕೋಟಿ ವಂಚನೆ ಪ್ರಕರಣದ ಕಡತ(ಫೈಲ್) ಕಬ್ಬನ್ ಪಾರ್ಕ್ ಠಾಣೆಯಿಂದ ಕಳುವಾಗಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಪೊಲೀಸ್ ಪೇದೆ ಕಿರಣ್ ವಿರುದ್ಧ ದೂರು ದಾಖಲಾಗಿದೆ. 

ಮಣಿಪಾಲ್ ಸಂಸ್ಥೆಗೆ ಮ್ಯಾನೇಜರ್ ಸಂದೀಪ್ ಗುರುರಾಜ್ ವಿರುದ್ಧ ವಂಚನೆ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಅಧ್ಯಕ್ಷ ರಂಜನ್ ಪೈ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ಚಾರ್ಜ್ ಶೀಟ್ ಹಂತಕ್ಕೆ ಬಂದಿತ್ತು. ಆದರೆ, ಇದೀಗ ಕೇಸ್ ಫೈಲ್ ಕಳುವಾಗಿದ್ದು, ವಿಶಾಲ್ ಚಂಗಪ್ಪ, ಸಂದೀಪ್, ಚಾರುಸ್ಮಿತಾ ಈ ಪ್ರಕರಣದ ಆರೋಪಿಗಳಾಗಿದ್ದಾರೆ ಎನ್ನಲಾಗಿದೆ.

ಪೇದೆ ವಿರುದ್ಧ ದೂರು: ಪ್ರಕರಣದಲ್ಲಿ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆ ಕಿರಣ್ ವಿರುದ್ಧ ಐಯ್ಯಣ್ಣ ರೆಡ್ಡಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಒಟ್ಟು ಠಾಣೆಯಲ್ಲಿ ಕೇಸ್ ಫೈಲ್ ನಲ್ಲಿದ್ದ ಒಂಬತ್ತು ದಾಖಲಾತಿಗಳು ಕಳ್ಳತನವಾಗಿದ್ದು, ಆರೋಪಿಗಳಿಗೆ ಬೇಲ್ ಸಿಗಬಹುದು ಎಂದು ಈ ಕೃತ್ಯ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಐಯ್ಯಣ್ಣ ರೆಡ್ಡಿ ಈ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದರು. ಇದೀಗ ಕೇಸ್ ಫೈಲ್ ಕಳುವಾಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟ 9 ದಾಖಲಾತಿಗಳು ಕಳುವಾಗಿದೆ. ಫೈಲ್ ಒಂದು ತಿಂಗಳ ಹಿಂದೆಯೇ ಕಳುವಾಗಿದೆ ಎಂದು ತಿಳಿದುಬಂದಿದೆ.

ಪೂರಕ ದಾಖಲೆ ಸಿದ್ಧಪಡಿಸಿ ಚಾರ್ಜ್‌ಶೀಟ್ ಸಲ್ಲಿಸಲು ಸಿದ್ಧತೆ ಪ್ರಕರಣದ ಪೂರಕ ಸಾಕ್ಷಿ ಮತ್ತು ದಾಖಲಾತಿ ಒದಗಿಸಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲು ಇನ್ಸ್‌ಪೆಕ್ಟರ್ ಐಯ್ಯಣ್ಣರೆಡ್ಡಿ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News