ನೀರಿನ ಅಭಾವ: ತರಕಾರಿ ದರದಲ್ಲಿ ವಿಪರೀತ ಹೆಚ್ಚಳ
Update: 2019-04-29 22:24 IST
ಬೆಂಗಳೂರು, ಎ.29: ಕೃಷಿ ಬೆಳೆಗಳಿಗೆ ನೀರಿನ ಅಭಾವವಾಗಿರುವ ಕಾರಣ ತರಕಾರಿ ಬೆಳೆಗಳ ದರದಲ್ಲಿ ಹೆಚ್ಚಳ ಕಂಡುಬಂದಿದ್ದು, ಒಂದು ಕೆಜಿ ಬಿನ್ಸ್ 100ರೂ.ಆಗಿದೆ. ಸಾಮಾನ್ಯ ದಿನಗಳಲ್ಲಿ ಒಂದು ಕೆಜಿ ಟೊಮೆಟೊ 10 ರೂ.ಇರುತ್ತಿದ್ದುದು ಈಗ 35ರಿಂದ 40 ರೂ.ಗೆ ಹೆಚ್ಚಳವಾಗಿದೆ.
ಒಂದು ತಿಂಗಳ ಹಿಂದೆ 30 ರೂ. ಇದ್ದ ಕ್ಯಾರೆಟ್ ದರ ಈಗ 62 ರೂ.ಗೆ ಏರಿಕೆ ಆಗಿದೆ. ಅಧಿಕ ತಾಪಮಾನ, ನೀರಿನ ಕೊರತೆಯಿಂದಾಗಿ ಇಳುವರಿ ಕಡಿಮೆಯಾಗಿದೆ. ಹಾಗೂ ಸಾರ್ವಜನಿಕ ಕಾರ್ಯಕ್ರಮಗಳು ಹೆಚ್ಚಿರುವುದರಿಂದ ಜನಸಾಮಾನ್ಯರಿಗೆ ತರಕಾರಿಗಳು ಸುಲಭವಾಗಿ ಸಿಗುತ್ತಿಲ್ಲ.
ಕೊತ್ತಂಬರಿ-ಕರಿಬೇವು ಕೂಡ ಕೈಗೆಟುಕದಷ್ಟು ದುಬಾರಿಯಾಗಿದೆ. ಇದೇ ರೀತಿಯಲ್ಲಿ ದಂಟು, ಚಕ್ಕೋತಾ, ಪಾಲಕ್, ಮೆಂತ್ಯ, ಸಬ್ಬಕ್ಕಿ ಸೊಪ್ಪು ಸೇರಿದಂತೆ ಎಲ್ಲ ಬಗೆಯ ಸೊಪ್ಪುಗಳ ದರದಲ್ಲೂ ಏರಿಕೆಯಾಗಿದೆ.