ವಿದ್ಯುತ್ ಅವಘಡ ಪ್ರಕರಣ: ಬಾಲಕ ಸಾಯಿ ಚರಣ್ ಚೇತರಿಕೆ
Update: 2019-04-29 22:32 IST
ಬೆಂಗಳೂರು, ಎ.29: ಆಟವಾಡುತ್ತಿದ್ದಾಗ ವಿದ್ಯುತ್ ಸ್ಪರ್ಶವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕ ಸಾಯಿ ಚರಣ್ ಚೇತರಿಸಿಕೊಳ್ಳುತ್ತಿದ್ದಾನೆ.
ಸೋಮವಾರ ಕೃತಕ ಉಸಿರಾಟದ ಉಪಕರಣ ತೆಗೆಯಲಾಗುತ್ತಿದ್ದು, ನೈಸರ್ಗಿಕವಾಗಿ ಉಸಿರಾಡಿಸಲು ಅವಕಾಶ ಕಲ್ಪಿಸಲಾಗುತ್ತದೆ. 6 ಗಂಟೆಗಳ ಕಾಲ ನೈಸರ್ಗಿಕವಾಗಿ ಉಸಿರಾಟ ಮಾಡಿದರೆ, ಮುಂದಿನ 2 ದಿನದಲ್ಲಿ ಮನೆಗೆ ಕಳುಹಿಸಿ ಕೊಡಲಾಗುವುದೆಂದು ವೈದ್ಯರು ತಿಳಿಸಿರುವುದಾಗಿ ಬಾಲಕನ ಪೋಷಕರಾದ ಬಸವರಾಜ್ ತಿಳಿಸಿದರು.
ಶಾಸಕ ಗೋಪಾಲಯ್ಯ 2 ಲಕ್ಷ ರೂ. ನೆರವು ನೀಡುವುದಾಗಿ ಹೇಳಿದ್ದಾರೆ. ಆದರೆ, ಸದ್ಯ ಚಿಕಿತ್ಸೆಗೆ 5 ಲಕ್ಷ ರೂ. ಖರ್ಚು ಆಗಲಿದೆ. ಈಗಾಗಲೇ ಒಂದೂವರೆ ಲಕ್ಷವನ್ನು ಆಸ್ಪತ್ರೆಗೆ ಪಾವತಿಸಿದ್ದೇವೆ. ಬಿಬಿಎಂಪಿ ಮೇಯರ್ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದು, ಬೆಸ್ಕಾಂ ಸಹ ಸಹಾಯ ಮಾಡುವುದಾಗಿ ಹೇಳಿದೆ ಎಂದು ಬಸವರಾಜ್ ಹೇಳಿದರು.