ಕೇರಳದಲ್ಲಿ ಎರಡು ದಿನಗಳ ಭಾರೀ ಮಳೆ ಸಾಧ್ಯತೆ

Update: 2019-04-30 04:54 GMT

ತಿರುವನಂತಪುರ, ಎ.30: ಫ್ಯಾನಿ ಚಂಡಮಾರುತ ಪರಿಣಾಮ ಕೇರಳದಲ್ಲಿ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಕೇರಳದ ವಯನಾಡು, ಮಲಪ್ಪುರಂನಲ್ಲಿ ಭಾರೀ ಮಳೆ ನಿರೀಕ್ಷಿಸಲಾಗಿದ್ದು,  ಗಂಟೆಗೆ 60 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ.

ಫ್ಯಾನಿ ಚಂಡಮಾರುತದ ವೇಗ ಮಂಗಳವಾರ ಹೊತ್ತಿಗೆ ಇನ್ಷಷ್ಟು ಅಧಿಕವಾಗುವ ಸಾಧ್ಯತೆ ಇದೆ.ರಕ್ಕಸ ಗಾತ್ರದ ಅಲೆಗಳು ಸಮುದ್ರದಲ್ಲಿ ಕಂಡು ಬರಲಿದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

ಕಳೆದ ರಾತ್ರಿ ಮೂವಟ್ಟುಪುಳಾದಲ್ಲಿ ಭಾರೀ ಗಾಳಿಗೆ ಹಲವು ಮರಗಳು ನೆಲಕ್ಕುರುಳಿದೆ. ಎಂಸಿ ರಸ್ತೆಯಲ್ಲಿ ಮರಗಳು ಅಡ್ಡಲಾಗಿ ಬಿದ್ದು ವಾಹನಗಳ ಸಂಚಾರಕ್ಕೆ ತಡೆ ಉಂಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News