ಬೆಂಗಳೂರು: ಸ್ನೇಹಿತರಿಂದಲೇ ಅತ್ಯಾಚಾರಕ್ಕೆ ಯತ್ನ; ಮಹಿಳೆ ದೂರು
ಬೆಂಗಳೂರು, ಎ.30: ಬರ್ತ್ ಡೇ ಪಾರ್ಟಿ ಹೆಸರಲ್ಲಿ ಸ್ನೇಹಿತರೆ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಜೀವನ್‌ಭೀಮಾ ನಗರ ವ್ಯಾಪ್ತಿಯಲ್ಲಿ ನಡೆದಿದೆ.
ವೇಲು ಮತ್ತು ಆತನ ಸ್ನೇಹಿತರು ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗಳಾಗಿದ್ದಾರೆ. ಕಳೆದ 24ರಂದು ಆರೋಪಿ ವೇಲುವಿನ ಫ್ರೆಂಡ್ ಬರ್ತ್ ಡೇ ಪಾರ್ಟಿಯನ್ನು ಜೀವನ್ ಭೀಮಾನಗರದ ಕ್ಲೌಡ್ ನೈನ್ ಪಬ್‌ನಲ್ಲಿ ಆಯೋಜಿಸಲಾಗಿತ್ತು. ಇದರಲಿ್ಲ ಈತನ ಸ್ನೇಹಿತೆ ಭಾಗವಹಿಸಿದ್ದಳು.
ವೇಲು ಹಾಗೂ ಆತನ ಸ್ನೇಹಿತರು ಪಾರ್ಟಿ ಮುಗಿಸಿ ಕಾರಿನಲ್ಲಿ ಡ್ರಾಪ್ ಮಾಡುವ ನೆಪದಲ್ಲಿ ಸ್ನೇಹಿತೆಯನ್ನು ಹತ್ತಿಸಿಕೊಂಡು ಹೋಗಿದ್ದಾರೆ. ಮಾರ್ಗ ಮಧ್ಯದಲ್ಲಿ ಸ್ನೇಹಿತೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಇದಕ್ಕೆ ಸ್ನೇಹಿತೆ ಒಪ್ಪದಿದ್ದಾಗ ಮೈ ಕೈ ಮುಟ್ಟಿ ಕಿರುಕುಳ ನೀಡಿದ್ದಾರೆ.
ಈ ವೇಳೆ ಸ್ನೇಹಿತೆ ಕಿರುಚಲು ಶುರುಮಾಡಿದಾಗ ಆಕೆಯನ್ನ ಕಾರಿನಿಂದ ಕೆಳಕ್ಕೆ ತಳ್ಳಿದ್ದಾರೆ. ಘಟನೆಯಲ್ಲಿ ಮಹಿಳೆಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಘಟನೆ ಸಂಬಂಧ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದಾರೆ.