ಕಿಡ್ನಾಪ್ ಆಗಿದ್ದ ಅಂದ ದಂಪತಿಯ ಮಗು ಪತ್ತೆ
Update: 2019-04-30 23:26 IST
ಬೆಂಗಳೂರು, ಎ.30: ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕಿಡ್ನಾಪ್ ಆಗಿದ್ದ ಅಂಧ ದಂಪತಿ ಮಗು ಸಾಗರ್ ಇಂದು(ಮಂಗಳವಾರ) ಕೆಂಗೇರಿ ಬಳಿ ಪತ್ತೆಯಾಗಿದ್ದಾನೆ.
ಮಹಿಳೆಯೊಬ್ಬಳು ನೀರು ಕುಡಿಸುವ ನೆಪದಲ್ಲಿ ಮಗುವನ್ನು ಕಿಡ್ನಾಪ್ ಮಾಡಿದ್ದಳು. ಘಟನೆ ಬಗ್ಗೆ ಸಾರ್ವಜನಿಕರು ಉಪ್ಪಾರಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, ಎಲ್ಲಾ ಠಾಣೆಗಳಿಗೆ ಮಾಹಿತಿ ನೀಡಿ ತನಿಖೆ ಕೈಗೊಂಡಿದ್ದರು.
ನಗರದ ಕೆಂಗೇರಿ ಬಳಿ ಮಗುವನ್ನ ನೋಡಿದ ಚಿತ್ರದುರ್ಗ ಮೂಲದ ಮಹಿಳೆಯೊಬ್ಬರು ಉಪ್ಪಾರಪೇಟೆ ಠಾಣೆ ಪೊಲೀಸರಿಗೆ ಮಾಹಿತಿ ನೀಡಿ ಮಗುವನ್ನು ಠಾಣೆಗೆ ತಲುಪಿಸಿದ್ದಾರೆ. ಈ ಬಗ್ಗೆ ಬೆಂ. ಪಶ್ಚಿಮ ವಲಯ ಡಿಸಿಪಿ ರವಿ ಡಿ. ಚನ್ನಣ್ಣನವರ್ ಮಾಹಿತಿ ನೀಡಿದ್ದಾರೆ.