×
Ad

ಬಿಜೆಪಿಯ ಕೀಳು ಮಟ್ಟದ ರಾಜಕಾರಣ ಅಂತ್ಯದ ಕಾಲ ಸಮೀಪವಿದೆ: ದಿನೇಶ್‌ಗುಂಡೂರಾವ್‌

Update: 2019-05-01 16:53 IST

ಬೆಂಗಳೂರು ಮೇ 1: ಬಿಜೆಪಿಯ ಕೀಳು ಮಟ್ಟದ ರಾಜಕಾರಣ ಅಂತ್ಯವಾಗುವ ಕಾಲ ಈಗ ಬಂದಿದೆ. ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ದೇಶದಲ್ಲಿ ಹೊಸ ಬೆಳವಣಿಗೆಗಳು ನಡೆಯಲಿವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ತಿಳಿಸಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಫಲಿತಾಂಶ ಬರುವ ಮುನ್ನವೆ ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರನ್ನು ಉದ್ದೇಶಿಸಿ ಕೀಳು ಮಟ್ಟದ ರಾಜಕಾರಣ ಮಾಡಲು ಪ್ರಾರಂಭಿಸಿದ್ದಾರೆ. ಇದೆಲ್ಲವು ಸ್ವಲ್ಪ ದಿನವೇ ಎಂಬುದನ್ನು ಅವರು ಅರಿತುಕೊಳ್ಳಬೇಕೆಂದು ತಿಳಿಸಿದರು.

ಬಿಜೆಪಿ ನಾಯಕರು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಪೌರತ್ವವನ್ನು ಪ್ರಶ್ನೆ ಮಾಡುವ ನೀಚ ಮಟ್ಟಕ್ಕೆ ಇಳಿಯುತ್ತಿದ್ದಾರೆ. ವಿರೋಧ ಪಕ್ಷಗಳ ನಾಯಕರ ಆತ್ಮವಿಶ್ವಾಸ, ಘನತೆಯನ್ನು ಹಾಳು ಮಾಡುವಂತಹ ಕೃತ್ಯ ಇದಾಗಿದೆ. ಇದೆಲ್ಲವನ್ನು ಮೀರಿ ಕಾಂಗ್ರೆಸ್ ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News