​ಫುಟ್‌ಬಾಲ್ ಮಾಂತ್ರಿಕ ಮೆಸ್ಸಿ 600 ಗೋಲುಗಳ ಸಾಧನೆ

Update: 2019-05-02 05:22 GMT

ಬಾರ್ಸಿಲೋನಾ: ಮೊದಲ ಹಂತದ ಚಾಂಪಿಯನ್ಸ್ ಲೀಗ್ ಸೆಮಿಫೈನಲ್‌ನಲ್ಲಿ ಫುಟ್‌ಬಾಲ್ ಮಾಂತ್ರಿಕ ಲಿಯೊನೆಲ್ ಮೆಸ್ಸಿ ಎರಡು ಗೋಲುಗಳನ್ನು ಗಳಿಸಿ ಬಾರ್ಸಿಲೋನಾ ಪರ 600 ಗೋಲುಗಳನ್ನು ಹೊಡೆದ ಹೊಸ ಮೈಲುಗಲ್ಲು ತಲುಪಿದರು. ಮೆಸ್ಸಿ ಅದ್ಭುತ ಆಟದಿಂದ ಬಾರ್ಸಿಲೋನಾ ತಂಡ ಲಿವರ್‌ಪೂಲ್ ತಂಡವನ್ನು 3-0 ಗೋಲುಗಳಿಂದ ಬಗ್ಗು ಬಡಿಯಿತು.

ಆರಂಭದಲ್ಲಿ ತಮ್ಮ ಮಾಜಿ ಕ್ಲಬ್ ವಿರುದ್ಧ 26ನೇ ನಿಮಿಷದಲ್ಲಿ ಗೋಲು ಗಳಿಸಿದರು. ಬಳಿಕ ಮೆಸ್ಸಿ ಆಟ ಮುಗಿಯಲು 15 ನಿಮಿಷಗಳಿದ್ದಾಗ ಮತ್ತೊಂದು ಗೋಲು ಗಳಿಸಿ ತಂಡದ ಮುನ್ನಡೆ ಹಿಗ್ಗಿಸಿದರು. 82ನೇ ನಿಮಿಷದಲ್ಲಿ ಫ್ರೀಕಿಕ್ ಮೂಲಕ ಇನ್ನೊಂದು ಗೋಲು ಹೊಡೆದು ಈ ಐತಿಹಾಸಿಕ ಸಾಧನೆ ಮಾಡಿದರು.

ಪಂದ್ಯದುದ್ದಕ್ಕೂ ಅದರಲ್ಲೂ ಮುಖ್ಯವಾಗಿ ಉತ್ತರಾರ್ಧದಲ್ಲಿ ಪ್ರಾಬಲ್ಯ ಮೆರೆದರೂ, ಗೋಲು ಗಳಿಸುವ ಅವಕಾಶಗಳನ್ನು ಕೈಚೆಲ್ಲಿದ ಲಿವರ್‌ಪೂಲ್ ಸೋಲೊಪ್ಪಿಕೊಳ್ಳಬೇಕಾಯಿತು.

ಬಾರ್ಸಿಲೋನಾ ಗೋಲ್‌ಕೀಪರ್ ವಿರೋಧಿ ತಂಡದ ಗೋಲಿನ ಪ್ರಯತ್ನವನ್ನು ಅದ್ಭುತವಾಗಿ ತಡೆದರು.
ಎರ್ನೆಸ್ಟೊ ವಲ್ವೆಡೋರ್ ಮಾರ್ಗದರ್ಶನದ ಬಾರ್ಸಿಲೋನಾ ತಂಡ 2009, 2015ರ ಬಳಿಕ ಮೂರನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಕಳೆದ ವಾರಾಂತ್ಯದಲ್ಲಿ ಸ್ಪಾನಿಷ್ ಲೀಗ್ ಪ್ರಶಸ್ತಿಯನ್ನು ಬಾರ್ಸಿಲೋನಾ ಗೆದ್ದುಕೊಂಡಿತ್ತು. ಮೇ 25ರಂದು ನಡೆಯುವ ಫೈನಲ್‌ನಲ್ಲಿ ವೆಲೆನ್ಸಿಯಾ ವಿರುದ್ಧ ಪ್ರಶಸ್ತಿಗಾಗಿ ಸೆಣೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News