ಇಶ್ರತ್ ಜಹಾನ್ ಪ್ರಕರಣ: ವಂಝಾರ, ಅಮೀನ್ ವಿರುದ್ಧದ ಆರೋಪಗಳನ್ನು ಕೈಬಿಟ್ಟ ಸಿಬಿಐ ನ್ಯಾಯಾಲಯ

Update: 2019-05-02 07:52 GMT

ಹೊಸದಿಲ್ಲಿ : ಗುಜರಾತ್ ರಾಜ್ಯದಲ್ಲಿ 2004ರಲ್ಲಿ ನಡೆದ ಇಶ್ರತ್ ಜಹಾನ್ 'ನಕಲಿ' ಎನ್‍ಕೌಂಡರ್ ಪ್ರಕರಣದಲ್ಲಿ ರಾಜ್ಯದ ಮಾಜಿ ಪೊಲೀಸ್ ಅಧಿಕಾರಿಗಳಾದ ಡಿ ಜಿ ವಂಝಾರ ಹಾಗೂ ಎನ್ ಕೆ ಅಮೀನ್ ಅವರ ವಿರುದ್ಧದ ಆರೋಪಗಳನ್ನು ಕೈಬಿಡಲಾಗಿದೆ. ಸಿಬಿಐ ನ್ಯಾಯಾಲಯವೊಂದು ಇಂದು ಆರೋಪಗಳನ್ನು ಕೈಬಿಡಲು ಅವರು ಮಾಡಿದ್ದ ಮನವಿಯನ್ನು ಒಪ್ಪಿದೆ.

ಇಶ್ರತ್ ಜಹಾನ್ ಪ್ರಕರಣದಲ್ಲಿ ಈ ಇಬ್ಬರು ಮಾಜಿ ಪೊಲೀಸ್ ಅಧಿಕಾರಿಗಳ ವಿರುದ್ಧ ಷಡ್ಯಂತ್ರ, ಅಕ್ರಮ ಬಂಧನ ಹಾಗೂ ಕೊಲೆ ಆರೋಪಗಳನ್ನು ಸಿಬಿಐ ಹೊರಿಸಿತ್ತು. ಈ ಪ್ರಕರಣದಲ್ಲಿ ಮಾಜಿ ಗುಜರಾತ್ ಪೊಲೀಸ್ ಮುಖ್ಯಸ್ಥ ಪಿ ಪಿ ಪಾಂಡೆ ಅವರನ್ನು ಈಗಾಗಲೇ ದೋಷಮುಕ್ತಗೊಳಿಸಲಾಗಿದೆ,. ಫೆಬ್ರವರಿ 2015ರಲ್ಲಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸುವ ಮುನ್ನ ಅವರು 19 ತಿಂಗಳು ಸೆರೆವಾಸ ಅನುಭವಿಸಿದ್ದರು.

ಹತ್ತೊಂಬತ್ತು ವರ್ಷದ ಇಶ್ರತ್ ಜಹಾನ್ ಮತ್ತಿತರ ಮೂವರು ಲಷ್ಕರ್ ಉಗ್ರರಾಗಿದ್ದರೆಂದು ಹಾಗೂ ಆಗಿನ ಗುಜರಾತ್ ಸಿಎಂ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ಹೂಡಿದ್ದರೆಂಬ ಆರೋಪದ ಮೇಲೆ ಮೂವರನ್ನೂ ಜೂನ್ 2004ರಲ್ಲಿ  ಅಹ್ಮದಾಬಾದ್ ಸಮೀಪ ಗುಂಡಿಕ್ಕಿ ಸಾಯಿಸಲಾಗಿತ್ತು.

ಸಿಬಿಐ 2013ರಲ್ಲಿ ಸಲ್ಲಿಸಿದ್ದ ತನ್ನ ಮೊದಲ ಚಾರ್ಜ್ ಶೀಟ್ ನಲ್ಲಿ ಪಾಂಡೆ, ವಂಝಾರ ಹಾಗೂ ಜಿ ಎಲ್ ಸಿಂಘಲ್ ಅವರು ಸೇರಿದಂತೆ ಏಳು ಗುಜರಾತ್ ಪೊಲೀಸ್ ಅಧಿಕಾರಿಗಳನ್ನು ಹೆಸರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News