ಸಿಬಿಎಸ್‍ಇ 12ನೇ ತರಗತಿಯ ಫಲಿತಾಂಶ ಪ್ರಕಟ: ಶೇ 83.4 ಮಂದಿ ತೇರ್ಗಡೆ

Update: 2019-05-02 09:18 GMT

ಹೊಸದಿಲ್ಲಿ, ಮೇ 2:  ಕೇಂದ್ರಿಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‍ಇ) 12ನೇ ತರಗತಿಯ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಶೇ 83.4 ಮಂದಿ ತೇರ್ಗಡೆಯಾಗಿದ್ದಾರೆ

ಫಲಿತಾಂಶವನ್ನು  ವೆಬ್ ಸೈಟ್ – cbse.nic.in  ಮತ್ತು cbseresults.nic.in ಇಲ್ಲಿ ನೋಡಬಹುದಾಗಿದೆ.

2018-19ನೇ ಸಾಲಿನಲ್ಲಿ  ತಿರುವನಂತಪುರ ಶೇ 98.2 ಫಲಿತಾಂಶ ದಾಖಲಿಸಿ ಪ್ರಥಮ ಸ್ಥಾನ ಪಡೆದಿದೆ. ಚೆನ್ನೈ  ಶೇ.92.93, ದಿಲ್ಲಿ  ಶೇ. 91.87 ಸಾಧನೆ ಮಾಡಿದೆ. ಅಂತರ್ ರಾಷ್ಟ್ರೀಯ ಶಾಲೆಗಳಲ್ಲಿ ಶೇ.95.43ರಷ್ಟು ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಘಾಝಿಯಾಬಾದ್ ನ  ಹನ್ಸಿಕಾ ಶುಕ್ಲಾ  ಮತ್ತು ಮುಝಾಫರ್ ನಗರದ ಕರೀಷ್ಮಾ ಅರೋರಾ  ಇವರು ಗರಿಷ್ಠ  ಅಂಕಗಳನ್ನು ಪಡೆದಿದ್ದಾರೆ. ಇವರು 500ರಲ್ಲಿ 499 ಅಂಕಗಳನ್ನು ಪಡೆದು ಪ್ರಥಮ ಸ್ಥಾನವನ್ನು ಹಂಚಿಕೊಂಡಿದ್ದಾರೆ. 

ರಿಷಿಕೇಶದ ಗೌರಂಗಿ ಚಾವ್ಲಾ, ರಾಯ್ಬರೇಲಿಯ ಐಶ್ವರ್ಯಾ , ಹರ್ಯಾಣದ   ಭವ್ಯಾ 498 ಅಂಕಗಳೊಂದಿಗೆ ಎರಡನೇ ಸ್ಥಾನ,  ದಿಲ್ಲಿಯ ಜಿಂದ್ ನೀರಜ್ ಜಿಂದಾಲ್  ಮತ್ತು ಮೆಹಾಕ್ ತಲ್ವಾರ್ ಸೇರಿದಂತೆ 18 ವಿದ್ಯಾರ್ಥಿಗಳು  ಮೂರನೆಯ ಸ್ಥಾನ ಪಡೆದಿದ್ದಾರೆ.

ಫಲಿತಾಂಶದಲ್ಲಿ ಬಾಲಕರಿಗಿಂತ ಬಾಲಕಿಯರು ಶೇ. 9ರಷ್ಟು  ಮೇಲುಗೈ ಸಾಧಿಸಿದ್ದಾರೆ. ಬಾಲಕಿಯರು ಶೇ. 88.70 , ತೃತೀಯಾ ಲಿಂಗಿಗಳು ಶೇ. 83.3 ಮತ್ತು ಬಾಲಕರು ಶೇ.79.4 ಮಂದಿ ಪಾಸಾಗಿದ್ದಾರೆ.

ಕೇಂದ್ರೀಯ ವಿದ್ಯಾಲಯ ಶಾಲೆ ಶೇ.98.54, ಟಿಬೆಟಿಯನ್ ಸ್ಕೂಲ್ ಶೇ. 96, ಅನುದಾನಿತ ಶಾಲೆ ಶೇ.88.49 ಮತ್ತು ಖಾಸಗಿ ಶಾಲೆ ಸಾಧನೆ ಶೇ.82.59.

ಒಟ್ಟು 13 ಲಕ್ಷ  ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News