ಮಸೂದ್ ಅಝರ್ ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸುವಂತೆ ಮಾಡಿದ ಸಯ್ಯದ್ ಅಕ್ಬರುದ್ದೀನ್ ಹೇಳಿದ್ದೇನು ?

Update: 2019-05-02 08:31 GMT
ಸಯ್ಯದ್ ಅಕ್ಬರುದ್ದೀನ್

ಹೊಸದಿಲ್ಲಿ : ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ, ಉಗ್ರ ಮಸೂದ್ ಅಝರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಬೇಕೆಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮುಂದೆ ಭಾರತದ ವಾದವನ್ನು ಮಂಡಿಸಿದ್ದ ವಿಶ್ವ ಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಸಯ್ಯದ್ ಅಕ್ಬರುದ್ದೀನ್ ಅವರು ಭಾರತೀಯ ಕ್ರಿಕೆಟಿಗ ಎಂ ಎಸ್ ಧೋನಿ  ಅವರ ಅಭಿಮಾನಿಯೆಂದು ತೋರುತ್ತದೆ. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಎಲ್ಲಾ ಸದಸ್ಯ ದೇಶಗಳನ್ನೂ ಒಪ್ಪಿಸಲು ಧೋನಿಯ ಧೋರಣೆಗಳಾದ “ಯಾವತ್ತೂ  ಸಮಯ ಮುಗಿಯಿತು ಎಂದು ಹೇಳಬೇಡಿ” ಹಾಗೂ “ಯಾವತ್ತೂ ಶೀಘ್ರ ಪ್ರಯತ್ನ ಕೈಬಿಡಬೇಡಿ” ಇವುಗಳನ್ನು ತಾವು  ಅನುಸರಿಸಿದ್ದಾಗಿ ಅವರು ಬುಧವಾರ ಹೇಳಿಕೊಂಡಿದ್ದಾರೆ.

ಮಸೂದ್ ಅಝರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಬುಧವಾರ ಘೋಷಿಸಿದ ನಂತರ ಮಾಧ್ಯಮವೊಂದರ ಜತೆ ಮಾತನಾಡಿದ ಅಕ್ಬರುದ್ದೀನ್ “ನಾನು ಯಾವತ್ತೂ ಎಂ ಎಸ್ ಧೋನಿ ಅವರ ಧೋರಣೆಯ ಮೇಲೆ ನಂಬಿಕೆಯಿರಿಸಿದವನು... ನಿಮ್ಮ ಗುರಿಯನ್ನು ಸಾಧಿಸುವ ಯತ್ನದಲ್ಲಿ ನೀವು ಎಣಿಸಿದ್ದಕ್ಕಿಂತ ಹೆಚ್ಚು ಸಮಯ ಇದೆ ಎಂದು ಅಂದುಕೊಳ್ಳುವುದು. ಯಾವತ್ತೂ ಸಮಯ ಮುಗಿಯಿತು ಎನ್ನದೇ ಇರುವುದು ಹಾಗೂ ಯಾವತ್ತೂ ಶೀಘ್ರ ಪ್ರಯತ್ನ ಕೈ ಬಿಡದೇ ಇರುವುದು,'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News