ಕೆಸಿಎಫ್ ಒಮಾನ್ ಮಸ್ಕತ್ ಝೋನ್ ವಾರ್ಷಿಕ ಮಹಾಸಭೆ

Update: 2019-05-02 12:47 GMT

ಒಮಾನ್, ಮೇ 2: ಕೆಸಿಎಫ್ ಒಮಾನ್, ಮಸ್ಕತ್ ಝೋನ್ ಇದರ ಮಹಾಸಭೆಯು ಇತ್ತೀಚೆಗೆ ಝೋನ್ ಅಧ್ಯಕ್ಷ ಮುಕ್ತಾರ್ ಪೊಯ್ಯತ್ತಬೈಲ್ ಅವರ ಅಧ್ಯಕ್ಷತೆಯಲ್ಲಿ ಅಲ್ ಕೌಸರ್ ಮದ್ರಸ ರುವಿಯಲ್ಲಿ ಜರುಗಿತು.

ರಾಷ್ಟ್ರೀಯ ನಾಯಕರ ನಿರ್ದೇಶನ ಪ್ರಕಾರ ಮಸ್ಕತ್ ಝೋನ್ ಅನ್ನು ಆಡಳಿತಾತ್ಮಕ ಕಾರಣಕ್ಕಾಗಿ ವಿಭಜಿಸಿ ರೂವಿ ಹಾಗೂ ಅಮ್ರಾತ್ ಸೆಕ್ಟರ್ ಕೇಂದ್ರೀಕರಿಸಿ ಮಸ್ಕತ್ ಝೋನ್, ಗಾಲ ಹಾಗೂ ಅಝೈಬ ಸೆಕ್ಟರ್ ಗಳನ್ನು ಕೇಂದ್ರೀಕರಿಸಿ ನೂತನವಾಗಿ ಬೌಷರ್ ಝೋನ್ ರೂಪೀಕರಿಸಲಾಯಿತು. ಬಳಿಕ ಚುಣಾವಣಾಧಿಕಾರಿಯಾಗಿ ಆಗಮಿಸಿದ್ದ ಕಾಸಿಂ ಹಾಜಿ ನೇತೃತ್ವದಲ್ಲಿ 2019 – 2021ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು

ನೂತನ ಅಧ್ಯಕ್ಷರಾಗಿ ನವಾಝ್ ಮಣಿಪುರ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ಬಾಸ್ ಮರಕಡ, ಕೋಶಾಧಿಕಾರಿಯಾಗಿ ಅಬ್ದುಲ್ ಲತೀಫ್ ತೋಡಾರ್, ಸಂಘಟನಾ ವಿಭಾಗದ ಅಧ್ಯಕ್ಷರಾಗಿ, ಶಫೀಕ್ ಮಾರ್ನಬೈಲ್, ಕಾರ್ಯದರ್ಶಿಯಾಗಿ ಹಾರಿಸ್ ಕೊಳಕೇರಿ, ಶಿಕ್ಷಣ ವಿಭಾಗದ ಅಧ್ಯಕ್ಷರಾಗಿ ಉಸ್ಮಾನ್ ಸಖಾಫಿ, ಕಾರ್ಯದರ್ಶಿ ಮಜೀದ್ ಕುಕ್ಕೆಪದವು, ಅಡ್ಮಿನ್ ಹಾಗೂ ಪಬ್ಲೀಕೇಷನ್ ಅಧ್ಯಕ್ಷರಾಗಿ ಫಝಲ್ ಬಜ್ಪೆ, ಕಾರ್ಯದರ್ಶಿ ಸುಹೈಲ್ ಅಮ್ರಾತ್, ವೆಲ್ಫೇರ್ ಹಾಗೂ ಇಹ್ಸಾನ್ ಅಧ್ಯಕ್ಷರಾಗಿ ಮುಹಮ್ಮದ್ ಸಾಗರ, ಕಾರ್ಯದರ್ಶಿಯಾಗಿ ಶಿಫಾದ್ ದೇರಳಕಟ್ಟೆ ಅವರನ್ನು ಆಯ್ಕೆ ಮಾಡಲಾಯಿತು.

ಕೆಸಿಎಫ್ ಒಮಾನ್ ಅಧ್ಯಕ್ಷ ಸೈಯ್ಯದ್ ಆಬಿದ್ ಅಲ್ ಹೈದರೂಸಿ ಎರುಮಾಡ್, ಕಾರ್ಯದರ್ಶಿ ಹನೀಫ್ ಸಅದಿ, ಕೋಶಾಧಿಕಾರಿ ಕಾಸಿಂ ಹಾಜಿ ನಿಝ್ವಾ ಹಾಗೂ ಸಂಘಟನಾಧ್ಯಕ್ಷ ಹಂಝ ಕನ್ನಂಗಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News