ದೇಶದ ಅತಿ ದೊಡ್ಡ ಚಿನ್ನ ಶುದ್ಧೀಕರಣ ಘಟಕ ಬೆಂಗಳೂರಿನಲ್ಲಿ ನಿರ್ಮಾಣ

Update: 2019-05-03 16:03 GMT

ಬೆಂಗಳೂರು, ಮೇ 3: ದೇಶದ ಅತಿ ದೊಡ್ಡ ಚಿನ್ನ ಶುದ್ಧೀಕರಣ ಘಟಕ 350 ಕೋಟಿ ರೂ.ಗಳ ವೆಚ್ಚದಲ್ಲಿ ನಗರದ ವೈಟ್‌ಫೀಲ್ಡ್ ಪ್ರದೇಶದಲ್ಲಿ ನಿರ್ಮಾಣವಾಗಲಿದೆ.

ಚಿನ್ನಾಭರಣ ತಯಾರಿಕಾ ಸಂಸ್ಥೆ ರಾಜೇಶ್ ಎಕ್ಸ್‌ಪೋರ್ಟ್ ಈ ಘಟಕವನ್ನು ನಿರ್ಮಾಣ ಮಾಡುತ್ತಿದ್ದು, 2019ರ ಅಂತ್ಯದ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ. ಸುಮಾರು 350 ಕೋಟಿ ವೆಚ್ಚದಲ್ಲಿ ಘಟಕದಲ್ಲಿ ವಾರ್ಷಿಕ 600 ಟನ್ ಚಿನ್ನ ಶುದ್ಧೀಕರಣ ಮಾಡಲಾಗುತ್ತದೆ. ಇದು ಭಾರತದಲ್ಲಿ ಪ್ರತಿ ವರ್ಷ ಬಳಕೆಯಾಗುವ ಚಿನ್ನದ ಶೇ 75ರಷ್ಟಿರಲಿದೆ ಎಂದು ಮೂಲಗಳು ಹೇಳಿವೆ.

ಭಾರತ ಮತ್ತು ವಿದೇಶದಲ್ಲಿ ರಾಜೇಶ್ ಎಕ್ಸ್‌ಪೋರ್ಟ್ ಚಿನ್ನ ಶುದ್ಧೀಕರಣ ಘಟಕದ ಸಾಮರ್ಥ್ಯ 2,400 ಟನ್‌ಗಳಷ್ಟಿದೆ. ಸಂಸ್ಥೆ ಚಿನ್ನವನ್ನು ಶುದ್ಧೀಕರಿಸಿ ಚಿನ್ನ ವಹಿವಾಟುದಾರರಿಗೆ ಪೂರೈಕೆ ಮಾಡುತ್ತದೆ. ಸದ್ಯಕ್ಕೆ ನಾವು ವಿಶ್ವದ ವಿವಿಧ ಭಾಗಗಳಲ್ಲಿ ಇರುವ ಗಣಿಗಳಿಂದ ಚಿನ್ನ ಆಮದು ಮಾಡಿಕೊಂಡು ಶುದ್ಧೀಕರಣಗೊಳಿಸುತ್ತಿದ್ದೇವೆ. ಈ ಘಟಕ ಕಾರ್ಯಾರಂಭ ಮಾಡಿದ ಬಳಿಕ ಚಿನ್ನದ ಶುದ್ಧೀಕರಣ ಮತ್ತು ಬ್ರಾಂಡಿಂಗ್ ಶುಲ್ಕದಲ್ಲಿ ಉಳಿತಾಯವಾಗಲಿದೆ ಎಂದು ರಾಜೇಶ್ ಎಕ್ಸ್‌ಪೋರ್ಟ್ ಅಧ್ಯಕ್ಷ ರಾಜೇಶ್ ಮೆಹ್ತಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News