×
Ad

ಆಸ್ತಿ ವಿವರ ಸಲ್ಲಿಸದ 32 ಬಿಬಿಎಂಪಿ ಸದಸ್ಯರ ಸದಸ್ಯತ್ವ ರದ್ದು ಸಾಧ್ಯತೆ

Update: 2019-05-03 21:35 IST

ಬೆಂಗಳೂರು, ಮೇ 3: ಸಕಾಲಕ್ಕೆ ಆಸ್ತಿ ವಿವರ ಸಲ್ಲಿಸದ ಬಿಬಿಎಂಪಿ ಸದಸ್ಯರ ವಿರುದ್ಧ ಕ್ರಮಕೈಗೊಳ್ಳುವಂತೆ ಪ್ರಾದೇಶಿಕ ಆಯುಕ್ತರು ಬಿಬಿಎಂಪಿಗೆ ಪತ್ರ ಬರೆದಿದ್ದು, ಬಿಬಿಎಂಪಿಯ 32 ಕಾರ್ಪೊರೇಟರ್‌ಗಳಿಗೆ ಸದಸ್ಯತ್ವ ಕಳೆದುಕೊಳ್ಳುವ ಭೀತಿ ಎದುರಾಗಿದೆ.

2016 ರಲ್ಲಿ 14 ಮಂದಿ ಬಿಬಿಎಂಪಿ ಸದಸ್ಯರು ಮತ್ತು 2017 ರಲ್ಲಿ 16 ಮಂದಿ ಸದಸ್ಯರು ಸರಿಯಾದ ಸಮಯಕ್ಕೆ ತಮ್ಮ ಆಸ್ತಿ ವಿವರವನ್ನು ಸಲ್ಲಿಸಿಲ್ಲ. ಅಲ್ಲದೆ ಆರು ಮಂದಿ ಸದಸ್ಯರು ಸುಳ್ಳು ದಾಖಲೆ ನೀಡಿದ್ದರು ಎಂಬ ದೂರು ದಾಖಲಾಗಿದೆ. ಆದರೆ ಇವರಲ್ಲಿ ಇಬ್ಬರು ಸದಸ್ಯರು ಈಗಾಗಲೇ ಮರಣ ಹೊಂದಿದ್ದು, ಇನ್ನಿಬ್ಬರು ಎರಡು ವರ್ಷದಲ್ಲಿ ಸಕಾಲದಲ್ಲಿ ಮಾಹಿತಿ ನೀಡಿಲ್ಲ. ಆದುದರಿಂದ ಸುಮಾರು 32 ಪಾಲಿಕೆ ಸದಸ್ಯರ ಸದಸ್ಯತ್ವ ರದ್ಧಾಗುವ ಸಾಧ್ಯತೆಯಿದೆ.

ನವ ಭಾರತಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಅನಿಲ್ ಶೆಟ್ಟಿ ಮಾಹಿತಿ ಹಕ್ಕಿನ ಅಡಿ ಪಡೆದ ದಾಖಲೆಗಳಿಂದ ಸದಸ್ಯರು ತಮ್ಮ ಆಸ್ತಿ ವಿವರ ಸಲ್ಲಿಸದಿರುವುದು ಪತ್ತೆ ಆಗಿದೆ. 2017 ರ ಅಕ್ಟೋಬರ್‌ನಲ್ಲಿ ಆಸ್ತಿ ವಿವರ ಸಲ್ಲಿಸಬೇಕಿತ್ತು. ಆದರೆ ಇನ್ನು ಹಲವರು ವಿವರ ಸಲ್ಲಿಸಸಿಲ್ಲ ಎಂಬ ಮಾಹಿತಿ ಬಹಿರಂಗಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News