ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಪ್ರಶಸ್ತಿಗೆ ಅರ್ಜಿ ಆಹ್ವಾನ
ಬೆಂಗಳೂರು, ಮೇ 3: ಸಾಲುಮರದ ತಿಮ್ಮಕ್ಕ ಇಂಟರ್ ನ್ಯಾಷನಲ್ ಫೌಂಡೇಷನ್ ವತಿಯಿಂದ ಕೊಡಮಾಡುವ ಪ್ರತಿಷ್ಠಿತ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್-2018 ಮತ್ತು 2019ಕ್ಕೆ ನಾಮ ನಿರ್ದೇಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಪ್ರಶಸ್ತಿಯು ನಗದು, ಬೆಳ್ಳಿಯ ಪದಕ, ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ. ಜೂನ್ 29ರಂದು ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವೃಕ್ಷಮಾತೆ, ಪದ್ಮಶ್ರೀ, ನಾಡೋಜ ಸಾಲುಮರದ ತಿಮ್ಮಕ್ಕ ಅಭಿನಂದನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪರಿಸರ ಸಂರಕ್ಷಣೆ, ವನ್ಯಪ್ರಾಣಿ ಸಂರಕ್ಷಣೆ, ಪರಿಸರ ಜಾಗೃತಿ, ನೀರಿನ ಸಂರಕ್ಷಣೆ, ಅರಣ್ಯಾಭಿವೃದ್ಧಿ ಹಾಗೂ ಸಮಾಜ ಸೇವೆ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಸೇವೆ, ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸೇವೆ ಗೆೈದವರಿಗೆ ಎರಡು ವಿಭಾಗದಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಫೌಂಡೇಷನ್ ತಿಳಿಸಿದೆ.
ಗಣನೀಯ ಸಾಧನೆಗೈದವರು ತಮ್ಮ ವೈಯಕ್ತಿಕ ಸಾಧನೆಗಳ ವಿವರಗಳನ್ನು ಸಾಲುಮರದ ತಿಮ್ಮಕ್ಕ ಇಂಟರ್ ನ್ಯಾಷನಲ್ ಫೌಂಡೇಷನ್, ನಂ.16, 1ನೆ ಅಡ್ಡರಸ್ತೆ, ಸೋಪ್ ಫ್ಯಾಕ್ಟರಿ ಬಡಾವಣೆ, ವಿನಾಯಕ ದೇವಸ್ಥಾನದ ಪಕ್ಕ, ಮಂಜುನಾಥನಗರ, ಬಾಗಲಗುಂಟೆ ವಿಲೇಜ್, ತುಮಕೂರು ರಸ್ತೆ, ಬೆಂಗಳೂರು-73, ಮೊ.ಸಂಖ್ಯೆ- 79963 00479, 70905 11118 ಅಥವಾ ವೆಬ್‌ಸೈಟ್ www.thimmakka foundation.org ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.