ಎ.ಗೋದಾವರಿ ದೇವಿ

Update: 2019-05-04 16:41 GMT

ಮಂಗಳೂರು: ಇಲ್ಲಿನ ಮಿಲಾಗ್ರಿಸ್ ಹೈಸ್ಕೂಲ್‌ನ ನಿವೃತ್ತ ಶಿಕ್ಷಕಿ, ಮಣ್ಣಗುಡ್ಡೆಯ ಸೇವಕ್ ಗಾರ್ಡನ್ ನಿವಾಸಿ ಎ.ಗೋದಾವರಿ ದೇವಿ ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.

ಗೋದಾವರಿ ದೇವಿಯವರು ಮಿಲಾಗ್ರಿಸ್ ಹೈಸ್ಕೂಲ್‌ನಲ್ಲಿ 34 ವರ್ಷಗಳಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು. ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿಯ ಮಾಜಿ ನಿರ್ದೇಶಕಿಯಾಗಿ, ಟೀಚರ್ಸ್‌ ಕೋ-ಆಪರೇಟಿವ್ ಸೊಸೈಟಿ, ಗಾಳದ ಕೊಂಕಣಿ ಅಭ್ಯುದಯ ಸಂಘ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಜವಾಬ್ಧಾರಿಯನ್ನು ನಿರ್ವಹಿಸಿದ್ದರು.

ಮೃತರು ಓರ್ವ ಪುತ್ರ ಸೇರಿದಂತೆ ಬಂಧುವರ್ಗದವರನ್ನು ಅಗಲಿದ್ದಾರೆ.

ಮೃತರ ನಿಧನಕ್ಕೆ ಮಾಜಿ ಕಾರ್ಪೋರೇಟರ್‌ಗಳಾದ ನವೀನ್‌ ಚಂದ್ರ ಮತ್ತು ಭಾಸ್ಕರ್ ರಾವ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ