ಉದ್ಯೋಗ ಅರಸಿ ಬರುವ ವಿದ್ಯಾರ್ಥಿನಿಯರಿಗೆ ಉಚಿತ ಹಾಸ್ಟೆಲ್ ವ್ಯವಸ್ಥೆ
ಬೆಂಗಳೂರು, ಮೇ 4: ರಾಜ್ಯದ ಇತರೆ ಭಾಗಗಳಿಂದ ಬೆಂಗಳೂರಿಗೆ ಉದ್ಯೋಗ ಅರಸಿ ಬರುವ ಹಾಗೂ ಸಾಮಾನ್ಯ ಪ್ರವೇಶ ಪರೀಕ್ಷೆ ಒಳಗೊಂಡಂತೆ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಲು ಒಂಟಿಯಾಗಿ ಬರುವ ವಿದ್ಯಾರ್ಥಿನಿಯರಿಗೆ ಹಾಗೂ ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸುರಕ್ಷಿತ ವಾಸ್ತವ್ಯವನ್ನು ಕಲ್ಪಿಸಲಾಗಿದೆ.
ಬೆಂಗಳೂರಿನಲ್ಲಿ 13 ಟ್ರಾನ್ಸಿಟ್ ವಸತಿ ಗೃಹಗಳನ್ನು ಗುರುತಿಸಿ ಅಲ್ಲಿ ವಾಸ್ತವ್ಯಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಇಲಾಖೆ ಮುಂದಾಗಿದೆ. ಆದಾಯದ ಮಿತಿ ಇಲ್ಲದೆ ಎಲ್ಲಾ ವರ್ಗದ ವಿದ್ಯಾರ್ಥಿನಿಯರು ಮತ್ತು ಮಹಿಳೆಯರು ಈ ವಸತಿ ಗೃಹಗಳಲ್ಲಿ ಉಳಿದುಕೊಳ್ಳಬಹುದಾಗಿದೆ. ಊಟ-ತಿಂಡಿ ಉಚಿತವಾಗಿ ಒದಗಿಸಲಾಗುತ್ತದೆ.
ಬೆಂಗಳೂರಿಗೆ ಆಗಮಿಸುವ ವಿದ್ಯಾರ್ಥಿನಿಯರು ಮತ್ತು ಮಹಿಳೆಯರಿಗೆ ಸಂಬಂಧಿಕರು ಹಾಗೂ ಸ್ನೇಹಿತರು ಯಾರೂ ಇಲ್ಲದಿದ್ದರೆ ತೀವ್ರ ತೊಂದರೆಯನ್ನು ಅನುಭವಿಸುತ್ತಾರೆ. ವಸತಿ ಗೃಹಗಳಲ್ಲಿ ಉಳಿದುಕೊಳ್ಳಲು ಬಹುತೇಕರು ಹಿಂದೇಟು ಹಾಕುತ್ತಾರೆ ಇಲ್ಲವೆ ಮುಜುಗರ ಪಡುತ್ತಾರೆ. ಅದನ್ನು ತಪ್ಪಿಸುವ ಸಲುವಾಗಿ ಟ್ರಾನ್ಸಿಟ್ ವಸತಿ ಗೃಹಗಳ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಲ್ಲಿ ವಾಸ್ತವ್ಯಕ್ಕೆ ಕೆಎಸ್‌ಸಿಡಬ್ಲು ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ಜಯಮಲ್(ದೂರವಾಣಿ: 080- 233304846), ಶಾರದ ಕುಟೀರ ಹಾಸ್ಟೆಲ್ ಶಂಕರಪುರ (080-26674697), ಯಂಗ್ ವುಮೆನ್ ಕ್ರಿಶ್ಚಿಯನ್ ಅಸೋಸಿಯೇಷನ್ ಹಾಸ್ಟೆಲ್ ಮಿಷನ್ ರಸ್ತೆ(080-22238574), ಯುನಿವರ್ಸಿಟಿ ವುಮೆನ್ ಅಸೋಸಿಯೇಷನ್ ಹಾಸ್ಟೆಲ್ ಸಂಪಂಗಿರಾಮನಗರ (080- 22223314), ಮಹಾತ್ಮಾಗಾಂಧಿ ವಿದ್ಯಾಪೀಠ ಹಾಸ್ಟೆಲ್ ಮಲ್ಲೇಶ್ವರ (080- 26662226).
ಜಯನಗರ ಸ್ತ್ರೀ ಸಮಾಜ ಹಾಸ್ಟೆಲ್(080-26674697), ಆಲಸ್ ಇಂಡಿಯಾ ವುಮೆನ್ ಕಾನ್ಪರೆನ್ಸ್ ಹಾಸ್ಟೆಲ್ ಜಯನಗರ(080-26349676), ಬಸವ ಸಮಿತಿ ಹಾಸ್ಟೆಲ್ ಮೈಸೂರು ರಸ್ತೆ (080-22723355), ವಿಶಾಲ್ ವಿದ್ಯಾಸಂಸ್ಥೆ ಹಾಸ್ಟೆಲ್ ಕನಕಪುರ ಮುಖ್ಯರಸ್ತೆ(9341289653), ಎಚ್‌ಡಿಎಸ್ ಹಾಸ್ಟೆಲ್ ಕೆಜಿಐಡಿ ಕಾಲನಿ, ನಾಗರಭಾವಿ ಕ್ಯಾಂಪಸ್(080-23160531), ಯಂಗ್ ವುಮೆನ್ ಕ್ರಿಶ್ಚಿಯನ್ ಅಸೋಸಿಯೇಷನ್ ಹಾಸ್ಟೆಲ್ ಕೋರಮಂಗಲ (080-25634813), ರೀಜಿನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಹಾಸ್ಟೆಲ್, ಜ್ಞಾನಭಾರತಿ ಕ್ಯಾಂಪಸ್ (080-23213243) ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಿಗೆ ಆಗಮಿಸುವ ಮುನ್ನ ಆಯಾ ವಸತಿ ನಿಲಯಗಳ ದೂರವಾಣಿಗೆ ಕರೆ ಮಾಡಿ ಕೊಠಡಿ ಕಾಯ್ದಿರಿಸಬೇಕು. ಜೊತೆಗೆ, ಪರೀಕ್ಷೆಯ ಪ್ರವೇಶ ಪತ್ರ ಕೆಲಸಕ್ಕೆ ಸಂದರ್ಶನ ಕರೆ ಪತ್ರ ಅಥವಾ ನೇಮಕಾತಿ ಹಾಜರುಪಡಿಸಬೇಕು. ಅಲ್ಲದೆ ಆಧಾರ್ ಕಾರ್ಡ್ ತಪ್ಪದೇ ತರಬೇಕು ಎಂದು ಪ್ರಕಟನೆ ತಿಳಿಸಿದೆ.