ಈಶ್ವರಪ್ಪರನ್ನು ಶಾಶ್ವತವಾಗಿ ‘ಲಾಕ್’ ಮಾಡಬೇಕು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್
Update: 2019-05-06 17:44 IST
ಬೆಂಗಳೂರು, ಮೇ 6: ‘ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಹೀಗಾಗಿಯೇ ಶಾಲೆಗೆ ಹೋಗುವ ಬಾಲಕಿಯೊಬ್ಬಳ ಬಗ್ಗೆ ಅಸಹ್ಯ ರೀತಿಯ ಹೇಳಿಕೆ ನೀಡಿದ್ದು ಅವರನ್ನು ಶಾಶ್ವತವಾಗಿ ‘ಲಾಕ್’ ಮಾಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಿನ್ನೆ ಕುಂದಗೋಳದಲ್ಲಿ ನಡೆದ ಬಿಜೆಪಿ ಪ್ರಚಾರ ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ನಾಲಿಗೆ ಹರಿಯಬಿಟ್ಟಿದ್ದ ಈಶ್ವರಪ್ಪ, ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈಶ್ವರಪ್ಪ ತಮ್ಮ ಅಮಾನವೀಯ ಮುಖವನ್ನು ಹೊರಹಾಕಿದ್ದಾರೆ ಎಂದು ಟ್ವಿಟ್ಟರ್ ಮೂಲಕ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.