ಬೆಂಗಳೂರು: ಸಾರ್ವಜನಿಕ ಕುಡಿಯುವ ನೀರು ವಿತರಣಾ ಕಾರ್ಯಕ್ರಮಕ್ಕೆ ಚಾಲನೆ
Update: 2019-05-06 18:28 IST
ಬೆಂಗಳೂರು, ಮೇ 6: ರಮಳಾನ್ ತಿಂಗಳ 23ನೇ ರಾತ್ರಿ ನಡೆಯುವ ಬೃಹತ್ ಆಧ್ಯಾತ್ಮಿಕ ಮಜ್ಲಿಸ್ ರೂಹಾನಿ ಇಜ್‌ತಿಮಾದ ಪ್ರಚಾರಾರ್ಥ ಎಸ್ಸೆಸ್ಸೆಪ್ ಬೆಂಗಳೂರು ಜಿಲ್ಲೆಯ ಒಂಬತ್ತು ಡಿವಿಶನ್ ನ ಹದಿನೆಂಟು ಸೆಕ್ಟರ್ ಗಳಲ್ಲಿ ನಡೆಯುವ ಸಾರ್ವಜನಿಕ ಕುಡಿಯುವ ನೀರು ವಿತರಣೆಯ ಜಿಲ್ಲಾ ಮಟ್ಟದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ನೀಲಸಂದ್ರ ಕಾರ್ಪೊರೇಟರ್ ಬಾಲಕೃಷ್ಣ ಚಾಲನೆ ನೀಡಿದರು. ಎಸ್ಸೆಸ್ಸೆಪ್ ರಾಷ್ಟ್ರೀಯ ಕಾರ್ಯದರ್ಶಿ ಮುಹಮ್ಮದ್ ಶರೀಫ್, ಎಸ್.ಎಮ್.ಎ. ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ರಹ್‌ಮಾನ್ ಹಾಜಿ, ಎಸ್ಸೆಸ್ಸೆಪ್ ರಾಜ್ಯ ಸದಸ್ಯ ಶಾಫಿ ಸಅದಿ, ಎಸ್.ವೈ.ಎಸ್ ಜಿಲ್ಲಾ ಸದಸ್ಯ ರಹ್ಮಾನಾಕ ನೀಲಸಂದ್ರ, ಎಸ್ಸೆಸ್ಸೆಪ್ ಜಿಲ್ಲಾಧ್ಯಕ್ಷ ಹಬೀಬುಲ್ಲಾ ನೂರಾನಿ, ಕಾರ್ಯದರ್ಶಿ ಶಿಹಾಬ್ ಮಡಿವಾಳ, ಮಿದ್‌ಲಾಜ್, ಸಲ್ಮಾನ್ ಉಸ್ತಾದ್, ಇಬ್ರಾಹಿಂ ಮಾಹೀನ್ ಉಪಸ್ಥಿತರಿದ್ದರು.