×
Ad

ಯುವಕನ ಕೊಲೆ ಪ್ರಕರಣ: ಆರೋಪಿ ಬಂಧನ

Update: 2019-05-06 21:32 IST

ಬೆಂಗಳೂರು, ಮೇ 6: ಯುವಕನೋರ್ವನನ್ನು ಕೊಲೆಗೈದಿದ್ದ ಆರೋಪ ಪ್ರಕರಣ ಸಂಬಂಧ ವೈಟ್‌ಫೀಲ್ಡ್ ವಿಭಾಗದ ವರ್ತೂರು ಠಾಣಾ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.

ಚಿತ್ರದುರ್ಗದ ಚಳ್ಳಕೆರೆಯ ಕೊಡಿಗೇಹಳ್ಳಿ ಗ್ರಾಮದ ಗುರುಪ್ರಸಾದ್(22) ಬಂಧಿತ ಆರೋಪಿ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.

ಮೇ.2ರಂದು ಇಲ್ಲಿನ ವರ್ತೂರಿನ ಗುಣ ಹೊಟೇಲ್ ಹತ್ತಿರ ಕ್ಷುಲ್ಲಕ ಕಾರಣಕ್ಕೆ ಕಾರ್ತಿಕ್ ಎಂಬಾತನ ಮೇಲೆ ತಂಪು ಪಾನೀಯ ಬಾಟಲಿನಿಂದ ಬಲವಾಗಿ ತಲೆಗೆ ಹೊಡೆದು ಕೊಲೆ ಮಾಡಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು, ಆರೋಪಿ ಗುರುಪ್ರಸಾದ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News