ಆರ್‌ಟಿಇ ದಾಖಲಾತಿಗೆ ಮೇ 15 ಅಂತಿಮ ದಿನ

Update: 2019-05-06 17:07 GMT

ಬೆಂಗಳೂರು, ಮೇ 6: ಆರ್‌ಟಿಇ ಮೊದಲ ಹಂತದ ಆನ್‌ಲೈನ್ ಲಾಟರಿ ಪ್ರಕ್ರಿಯೆ ನಡೆದಿದ್ದು, 7,636 ಸೀಟುಗಳನ್ನು ಹಂಚಿಕೆ ಮಾಡಲಾಗಿದೆ. ಇದರಲ್ಲಿ ಆಯ್ಕೆಗೊಂಡಿರುವವರು ಮೇ 15 ರೊಳಗೆ ಸಂಬಂಧಿಸಿದ ಶಾಲೆಯಲ್ಲಿ ದಾಖಲು ಮಾಡಿಕೊಳ್ಳಲು ಸೂಚಿಸಲಾಗಿದೆ.

ಮೊದಲ ಹಂತದ ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿ 16,563 ಅರ್ಜಿಗಳನ್ನು ಪರಿಗಣಿಸಿದ್ದು, 7,636 ಸೀಟುಗಳಿಗೆ ಸೀಟು ಹಂಚಿಕೆ ಮಾಡಲಾಗಿದೆ. ಖಾಲಿ ಉಳಿದಿರುವ ಸೀಟುಗಳಿಗೆ ಎರಡನೆ ಹಂತದಲ್ಲಿ ಭರ್ತಿ ಮಾಡಲಾಗುತ್ತದೆ. ಹೀಗಾಗಿ, ಆಯ್ಕೆಯಾದ ಮಕ್ಕಳ ಪೋಷಕರು ನಿಗದಿತ ಅವಧಿಯೊಳಗೆ ದಾಖಲಾತಿ ಮಾಡಿಸಿಕೊಳ್ಳಬೇಕು. ಅದನ್ನು ಕೂಡಲೇ ತಂತ್ರಾಂಶದಲ್ಲಿ ಅಪ್‌ಡೇಟ್ ಮಾಡಬೇಕು ಎಂದು ಪ್ರಕಟನೆ ತಿಳಿಸಿದೆ.

ವಿಶೇಷ ಪ್ರವರ್ಗಗಳ ಮತ್ತು ಇ.ಐ.ಡಿ. ಮೂಲಕ ಸಲ್ಲಿಸಿದ ಅರ್ಜಿಗಳ ನೈಜತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ದಾಖಲೆಗಳೊಂದಿಗೆ ಹಾಜರಾಗಿ ಖಾತರಿಪಡಿಸಿಕೊಳ್ಳಲು ಪೋಷಕರಿಗೆ ಅವಕಾಶ ನೀಡಲಾಗಿದೆ. ಈ ಅವಕಾಶ ಬಳಸಿಕೊಳ್ಳದ ಅಥವಾ ಮೂಲ ದಾಖಲಾತಿಗೆ ತಾಳೆಯಾಗದ 1,836 ಅರ್ಜಿಗಳನ್ನು ಆನ್‌ಲೈನ್ ಲಾಟರಿ ಪ್ರಕ್ರಿಯೆ ಪರಿಗಣಿಸಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News