ಈ ಫೋನ್ ಗಳಲ್ಲಿ ಡಿಸೆಂಬರ್ 31ರಿಂದ ವಾಟ್ಸ್ಯಾಪ್ ಕೆಲಸ ಮಾಡುವುದಿಲ್ಲ!

Update: 2019-05-08 10:02 GMT

ಮುಂದಿನ ವರ್ಷದಿಂದ ವಿಂಡೋಸ್ ಫೋನ್ ಹೊಂದಿರುವ ಯಾರು ಕೂಡ ವಾಟ್ಸ್ಯಾಪ್ ಬಳಸುವುದು ಸಾಧ್ಯವಾಗುವುದಿಲ್ಲ. ವಿಂಡೋಸ್ ಫೋನ್ ಗಳಿಗೆ ಡಿಸೆಂಬರ್ 31, 2019ರಂದು ವಾಟ್ಸ್ಯಾಪ್ ಸಪೋರ್ಟ್ ನಿಲ್ಲಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಎಲ್ಲಾ ಅವತರಣಿಕೆಯ ಆಪರೇಟಿಂಗ್ ಸಿಸ್ಟಂಗಳನ್ನು ಹೊಂದಿದ ವಿಂಡೋಸ್ ಫೋನ್ ‍ಗಳಲ್ಲಿಯೂ ವಾಟ್ಸ್ಯಾಪ್ ಸಪೋರ್ಟ್ ಈ ವರ್ಷಾಂತ್ಯದಲ್ಲಿ ನಿಲ್ಲುವುದು ಹಾಗೂ ವಿಂಡೋಸ್ ನಲ್ಲಿ ಕಾರ್ಯಾಚರಿಸುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.

ವಿಂಡೋಸ್ ಫೋನ್ ಗಳಿಗೆ ಕೊನೆಯ ಅಪ್‍ಡೇಟ್ ಜೂನ್ ತಿಂಗಳಲ್ಲಿ ವಾಟ್ಸ್ಯಾಪ್ ನಡೆಸಲಿದೆ. ವಾಟ್ಸ್ಯಾಪ್ ಈ ಹಿಂದೆ ವಿಂಡೋಸ್ ಫೋನ್ 7ನಲ್ಲಿ ಕಾರ್ಯಾಚರಿಸುವುದನ್ನು 2016ರ ಅಂತ್ಯದಲ್ಲಿಯೇ ನಿಲ್ಲಿಸಿದೆ.

ಆ್ಯಂಡ್ರಾಯ್ಡ್ ಹಳೆ ವರ್ಷನ್ (ವಿ2.3.7 ಹಾಗೂ ಹಳೆಯ) ಹಾಗೂ ಐಒಎಸ್ (ಐಒಎಸ್ 7 ಮತ್ತು ಹಳೆಯ)  ವರ್ಷನ್ ಗಳಲ್ಲಿ ವಾಟ್ಸ್ಯಾಪ್ ಕಾರ್ಯಾಚರಿಸುವುದನ್ನು ಫೆಬ್ರವರಿ 1, 2020ರಲ್ಲಿ ನಿಲ್ಲಿಸಲಿದೆ ಎಂದು ಸಂಸ್ಥೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News