'ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿ’ ಎಂಬ ಶಾಸಕ ಯತ್ನಾಳ್ ಹೇಳಿಕೆಗೆ ಪ್ರಭಾಕರ ಕೋರೆ ಆಕ್ಷೇಪ
Update: 2019-05-08 19:50 IST
ಬೆಂಗಳೂರು, ಮೇ 8: ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆ ಇನ್ನೂ ಖಾಲಿಯಾಗಿಲ್ಲ. ಹುದ್ದೆ ತೆರವಾಗುವ ಮೊದಲೇ ‘ನಾನೂ ಆ ಹುದ್ದೆಯ ಆಕಾಂಕ್ಷಿ’ ಎಂಬ ಹೇಳಿಕೆ ನೀಡುವುದು ಸರಿಯಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಆಕ್ಷೇಪಿಸಿದ್ದಾರೆ.
ಬುಧವಾರ ಇಲ್ಲಿನ ಡಾಲರ್ಸ್ ಕಾಲನಿಯಲ್ಲಿನ ಯಡಿಯೂರಪ್ಪ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಶಾಸಕ ಯತ್ನಾಳ್ ಮಾತ್ರವಲ್ಲ, ಇನ್ನೂ ಹಲವು ಮುಖಂಡರು ಆಕಾಂಕ್ಷಿಗಳಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಸಿಎಂ ಆಗುವವರು ಇಲ್ಲಿಗೇಕೆ ಬರ್ತಾರೆ: ಮುಖ್ಯಮಂತ್ರಿ ಆಗುವವರು ಬಿಜೆಪಿಗೆ ಏಕೆ ಬರುತ್ತಾರೆಂದು, ಗೃಹ ಸಚಿವ ಎಂ.ಬಿ.ಪಾಟೀಲ್ ಬಿಜೆಪಿ ಬರಲಿದ್ದಾರೆ ಎಂಬ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಪಾಟೀಲ್ ಬಿಜೆಪಿಗೆ ಬಂದರೂ ಅವರಿಗೆ ಸಿಎಂ ಹುದ್ದೆ ಸಿಗುವುದಿಲ್ಲ ಎಂದು ಹೇಳಿದರು.