ಬೆಂಗಳೂರು-ಚಿದಂಬರಂ, ಬೆಂಗಳೂರು-ಎರ್ನಾಕುಲಂ ನಡುವೆ ಕೆಎಸ್ಸಾರ್ಟಿಸಿ ಬಸ್ ವ್ಯವಸ್ಥೆ

Update: 2019-05-08 16:35 GMT

ಬೆಂಗಳೂರು, ಮೇ 8: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ)ಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು-ಚಿದಂಬರಂ ಮಾರ್ಗದಲ್ಲಿ ಎ.ಸಿ.ಸ್ಲೀಪರ್ ಹಾಗೂ ಬೆಂಗಳೂರು-ಎರ್ನಾಕುಲಂ ಮಾರ್ಗದಲ್ಲಿ ಅಂಬಾರಿ ಡ್ರೀಮ್ ಕ್ಲಾಸ್ (ಮಲ್ಟಿಆಕ್ಸಲ್ ಎಸಿ ಸ್ಲೀಪರ್) ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಬೆಂಗಳೂರು-ಚಿದಂಬರಂ ವಯಾ ಹೊಸೂರು, ತಿರುವಣ್ಣಾಮಲೈ, ನೈವೇಲಿ ಮಾರ್ಗ ಪ್ರಯಾಣ ದರ-900ರೂ., ಬೆಂಗಳೂರು-ಎರ್ನಾಕುಲಂ ಅಂಬಾರಿ ಡ್ರೀಮ್ ಕ್ಲಾಸ್ ವಯಾ ಹೊಸೂರು, ಸೇಲಂ, ಕೊಯಮತ್ತೂರು, ಪಾಲ್ಗಾಟ್, ತ್ರಿಶೂರ್ ಮಾರ್ಗ ಪ್ರಯಾಣ ದರ-1,400 ರೂ. ಎಂದು ಕೆಎಸ್ಸಾರ್ಟಿಸಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News