ಬೀದಿ ನಾಯಿ ಸಾವು ಪ್ರಕರಣ: ಎನ್‌ಜಿಒ-ವೈದ್ಯರ ವಿರುದ್ಧ ಎಫ್‌ಐಆರ್

Update: 2019-05-09 17:42 GMT

ಬೆಂಗಳೂರು, ಮೇ 9: ವೈದ್ಯರ ಯಡವಟ್ಟಿನಿಂದ ಬೀದಿ ನಾಯಿ ಸತ್ತಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಎನ್‌ಜಿಒ ಮತ್ತು ವೈದ್ಯರ ವಿರುದ್ಧ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಸುಷ್ಮಾ ಎಂಟರ್‌ಪ್ರೈಸಸ್ ಎಂಬ ಹೆಸರಿನ ಎನ್‌ಜಿಒ ಕಂಪನಿ ಕೆಲದಿನಗಳ ಹಿಂದೆ ಬೈಯ್ಯಪ್ಪನಹಳ್ಳಿಯಲ್ಲಿ ಸಂತಾನಹರಣ ಚಿಕಿತ್ಸೆಗೆಂದು ಬೀದಿ ನಾಯಿಯೊಂದನ್ನ ಹಿಡಿದುಕೊಂಡು ಹೋಗಿದ್ದರು. ಬಳಿಕ ಅದಕ್ಕೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿ ಮತ್ತೆ ಅದೇ ಸ್ಥಳಕ್ಕೆ ತಂದು ಬಿಟ್ಟು ಹೋಗಿದ್ದರು. ಆದರೆ, ಕೆಲ ದಿನಗಳ ಬಳಿಕೆ ನಾಯಿ ಸಾವನ್ನಪ್ಪಿದೆ.

ವೈದ್ಯರ ಯಡವಟ್ಟಿನಿಂದ ನಾಯಿ ಸಾವನ್ನಪ್ಪಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೇ ಈ ಸಂಬಂಧ ನವೀನ ಕಾಮತ್ ಎಂಬುವರು ಎನ್‌ಜಿಒಇ ಮುಖ್ಯಸ್ಥ ಅರುಣಾ ರೆಡ್ಡಿ ಹಾಗೂ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರ ವಿರುದ್ಧ ದೂರು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News