ವಿದ್ಯಾರ್ಥಿಗಳು ಸಮಾಜದಲ್ಲಿ ಶ್ರೇಷ್ಠ ನಾಗರಿಕರಾಗಿ ಬದುಕಬೇಕು: ಜೈನ್ ವಿವಿ ಕುಲಪತಿ ಡಾ.ಸುಂದರ್‌ರಾಜನ್
ಬೆಂಗಳೂರು, ಮೇ 10: ವಿದ್ಯಾರ್ಥಿಗಳು ಭವಿಷ್ಯದ ದೃಷ್ಟಿಯಿಂದ ಸಮಾಜ ಪರಿವರ್ತನೆ ಹಾಗೂ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಜೈನ್ ವಿಶ್ವ ವಿದ್ಯಾಲಯದ ಕುಲಪತಿ ಡಾ.ಸುಂದರ್ ರಾಜನ್ ಇಂದಿಲ್ಲಿ ಕರೆ ನೀಡಿದ್ದಾರೆ.
ಶುಕ್ರವಾರ ಜಾಲಹಳ್ಳಿಯಲ್ಲಿನ ಸೈಂಟ್ ಕ್ಲಾರೆಟ್ ಕಾಲೇಜಿನಲ್ಲಿ ಆಯೋಜಿಸಿದ್ದ ಪದವಿ ಪ್ರಧಾನ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯೂ ಸಮಾಜದಲ್ಲಿ ಶ್ರೇಷ್ಠ ನಾಗರಿಕನಾಗಿ ಬದುಕಲು ಶ್ರಮಿಸಬೇಕು ಎಂದು ಸಲಹೆ ಮಾಡಿದರು.
ಎಲ್ಲ ವಿದ್ಯಾರ್ಥಿಗಳು ಸತ್ಯನಿಷ್ಠೆ, ಕರುಣೆ, ಸೌಹಾರ್ದತೆ, ಸಹಬಾಳ್ವೆಯನ್ನು ರೂಢಿಸಿಕೊಳ್ಳುವ ಮೂಲಕ ಎಂತಹದ್ದೆ ಕಠಿಣ ಪ್ರಸಂಗ ಎದುರಾದರೂ ನಿರಾಶೆಗೊಳ್ಳದೆ ಅದನ್ನು ಎದುರಿಸಿ ಧೈರ್ಯವನ್ನು ಬೆಳಸಿಕೊಳ್ಳಬೇಕು ಎಂದು ಡಾ.ಸುಂದರ್ ರಾಜನ್ ಹೇಳಿದರು.
ಈ ವೇಳೆ ಕಾಲೇಜಿನ ಪ್ರಾಂಶುಪಾಲ ಫಾದರ್ ಡಾ.ಸಾಬುಜಾರ್ಜ್, ವ್ಯವಸ್ಥಾಪಕ ಫಾ.ಬೆನ್ನಿ ಮಾಥ್ಯು, ಆಡಳಿತಾಧಿಕಾರಿ ಫಾದರ್ ಜೊಸೇಫ್ ಮಾಥ್ಯು, ಮರಿಯಾ ಡಿಸೋಜಾ, ಜಯಲಕ್ಷ್ಮಿ, ಜೊಸೇಫ್, ಸೀಮಾ, ಮಾದೇಶ್ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಜರಿದ್ದರು.