ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಹಿಳೆ ಸೆರೆ
Update: 2019-05-11 19:26 IST
ಬೆಂಗಳೂರು, ಮೇ 11: ಯುವತಿಯರನ್ನಿಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದಡಿ ಮಹಿಳೆಯೊಬ್ಬಾಕೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಗರದ ಎ.ಆರ್.ಮಾಧುರಿ ಎಂಬಾಕೆ ಬಂಧಿತ ಆರೋಪಿ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.
ಮಾಧುರಿ ಕೋರಮಂಗಲ 5ನೆ ಬ್ಲಾಕ್‌ನ ಕೆಎಚ್‌ಬಿ ಕಾಲನಿ, 7ನೇ ’ಸಿ’ ಮುಖ್ಯರಸ್ತೆ, 2ನೆ ಕ್ರಾಸ್‌ನಲ್ಲಿ ಮಸಾಜ್ ಪಾರ್ಲರ್ ತೆರೆದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾಳೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿ ಮಾಧುರಿ, ಬೆಂಗಳೂರು ನಗರ ಮತ್ತು ಬೇರೆ ಜಿಲ್ಲೆಗಳಿಂದ ಕರೆತಂದಿದ್ದ ನೊಂದ ಹುಡುಗಿಯರನ್ನು ವೇಶ್ಯಾವಾಟಿಕೆಯಿಂದ ಸಂರಕ್ಷಣೆ ಮಾಡಲಾಗಿರುತ್ತದೆ. ಆರೋಪಿತೆಯಿಂದ 3 ಸಾವಿರ ರೂ. ನಗದು, ಮೊಬೈಲ್ ಜಪ್ತಿ ಮಾಡಿದ್ದಾರೆ.