×
Ad

ಮಕ್ಕಳ ಆರೋಗ್ಯ ಕಾಪಾಡುವುದು ಮುಖ್ಯ: ಸಿಐಡಿ ಎಡಿಜಿಪಿ ಪ್ರವೀಣ್ ಸೂದ್

Update: 2019-05-11 23:26 IST

ಬೆಂಗಳೂರು, ಮೇ 11: ರಾಷ್ಟ್ರದ ಭವಿಷ್ಯ ಮಕ್ಕಳು. ಹೀಗಾಗಿ ಮಕ್ಕಳ ಆರೋಗ್ಯ ಮತ್ತು ಯೋಗಕ್ಷೇಮ ಅತ್ಯಂತ ಮಹತ್ವದ್ದು ಎಂದು ಸಿಐಡಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಇಂದಿಲಿ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಮಕ್ಕಳ ಆರೋಗಕ್ಕೆ ಸಂಬಂದಿಸಿದ ಆಧುನಿಕ ಸೌಲಭ್ಯಗಳ ಸಕ್ರವರ್ಲ್ಡ್ ಆಸ್ಪತ್ರೆ ಇನ್‌ಸ್ಟಿಟ್ಯೂಟ್ ಆಫ್ ಪಿಡಿಯಾಟ್ರಿಕ್ಸ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಗ್ಯಾಸ್ಟ್ರೊಎಂಟರಾಲಜಿ ಪ್ರಕರಣಗಳನ್ನು ನಿರ್ವಹಿಸಲು ನೂತನ ಆಸ್ಪತ್ರೆ ಪರಿಣತ ವೈದ್ಯರು ಶ್ರಮಿಸಬೇಕು ಎಂದರು.

ಡಾ.ಎಸ್.ಕೆ.ಯಾಚ, ಡಾ.ಸಿ.ರಾಮಚಂದ್ರ, ಡಾ. ಅನಿಲ್ ಕುಮಾರ್, ಡಾ. ರವಿಕಿರಣ್ ಎಸ್., ಡಾ.ಸಾಯಿ ಶಂಕರ್, ಡಾ.ಶಿವಕುಮಾರ್ ಸಂಬರ್ಗಿ ಸೇರಿದಂತೆ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News