ಫೆಡರರ್‌ಗೆ ಸೋಲುಣಿಸಿದ ಥೀಮ್ ಸೆಮಿಗೆ

Update: 2019-05-11 18:42 GMT

ಮ್ಯಾಡ್ರಿಡ್, ಮೇ 11: ಸ್ವಿಸ್‌ನ ಹಿರಿಯ ಆಟಗಾರ ರೋಜರ್ ಫೆಡರರ್‌ರನ್ನು ರೋಚಕವಾಗಿ ಸದೆಬಡಿದ ಡೊಮಿನಿಕ್ ಥೀಮ್ ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.

ಇಲ್ಲಿ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೀಯದ ಆಟಗಾರ ಥೀಮ್ ಮೂರು ವರ್ಷಗಳ ಬಳಿಕ ಮೊದಲ ಬಾರಿ ಆವೆಮಣ್ಣಿನ ಅಂಗಣದಲ್ಲಿ ಆಡಿದ ಫೆಡರರ್‌ನ್ನು 3-6,7-6, 6-4 ಸೆಟ್‌ಗಳ ಅಂತರದಿಂದ ಮಣಿಸಿದರು. ಥೀಮ್ ಸೆಮಿ ಫೈನಲ್‌ನಲ್ಲಿ ವಿಶ್ವದ ನಂ. 1 ಆಟಗಾರ ನೊವಾಕ್ ಜೊಕೊವಿಕ್‌ರ ಕಠಿಣ ಸವಾಲು ಎದುರಿಸಲಿದ್ದಾರೆ. ಜೊಕೊವಿಕ್ ಕ್ವಾರ್ಟರ್ ಫೈನಲ್ ಎದುರಾಳಿ ಮರಿನ್ ಸಿಲಿಕ್ ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ಸೆಮಿ ಫೈನಲ್‌ಗೆ ತಲುಪಿದ್ದಾರೆ.

‘‘ರೋಜರ್ ಕ್ಲೇ ಕೋರ್ಟ್‌ನಲ್ಲಿ ನಿಜಕ್ಕೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರ ವಿರುದ್ಧ ಆಡುವ ಪ್ರತಿ ಕ್ಷಣವೂ ಅತ್ಯಂತ ಮುಖ್ಯ. ಅವರ ಎದುರು ಗಳಿಸುವ ಪ್ರತಿ ಅಂಕವೂ ಸವಾಲಿನದ್ದು. ನಾನು ಅವರ ಗೆದ್ದಿರುವುದರ ಹಿಂದೆ ಸ್ವಲ್ಪ ಅದೃಷ್ಟವೂ ಇದೆ‘‘ ಎಂದು ಥೀಮ್ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News